Ad imageAd image

ಮುಗಿದ ದಸರಾ ರಜೆ : ಇಂದಿನಿಂದ ಶಾಲೆಗಳು ಪುನಾರಂಭ

Bharath Vaibhav
ಮುಗಿದ ದಸರಾ ರಜೆ : ಇಂದಿನಿಂದ ಶಾಲೆಗಳು ಪುನಾರಂಭ
WhatsApp Group Join Now
Telegram Group Join Now

ಬೆಂಗಳೂರು : ಅಕ್ಟೋಬರ್ 3 ರಿಂದ ಶಾಲಾ ಮಕ್ಕಳಿಗೆ ನೀಡಿದ್ದ ‘ದಸರಾ ರಜೆ’ ಅಂತ್ಯಗೊಂಡಿದ್ದು ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭಗೊಳ್ಳಲಿದೆ.

ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20ರವರೆಗೆ ದಸರಾ ರಜೆ ಘೋಷಣೆ ಮಾಡಿತ್ತು, ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ದಸರಾ ರಜೆಯನ್ನು ನೀಡಲಾಗಿತ್ತು.ಅಕ್ಟೋಬರ್ 21 ರ ಇಂದಿನಿಂದ ಶಾಲೆಗಳು ಮತ್ತೆ ಆರಂಭವಾಗಲಿವೆ.

2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಘೋಷಿಸಲಾಗಿತ್ತು. ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 17 ದಿನ ದಸರಾ ರಜೆ ನೀಡಲಾಗಿತ್ತು.

ರಜೆಯ ಮಜಾ ನಿನ್ನೆಗೆ ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭಗೊಳ್ಳಲಿದೆ. ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ 2024-25ನೇ ದಸರಾ ರಜೆ ಆರಂಭವಾಗಿತ್ತು. ಅಕ್ಟೋಬರ್ 21ರಿಂದ ಎರಡನೇ ಅವಧಿ ಆರಂಭವಾಗಲಿದ್ದು, 2025 ಏಪ್ರಿಲ್ 10 ರವರೆಗೆ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!