Ad imageAd image

ಅಮ್ಮಾಜೇಶ್ವರಿ ಏತನೀರಾವರಿ ಯೋಜನೆ ಪೈಪ್ ಜೋಡಣೆಗೆ ಚಾಲನೆ.

Bharath Vaibhav
ಅಮ್ಮಾಜೇಶ್ವರಿ ಏತನೀರಾವರಿ ಯೋಜನೆ ಪೈಪ್ ಜೋಡಣೆಗೆ ಚಾಲನೆ.
WhatsApp Group Join Now
Telegram Group Join Now

ಐಗಳಿ: -ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಕೊಟ್ಟಲಗಿ ಏತ್ ನೀರಾವರಿ ಯೋಜನೆಯ ಎಂ ಎಸ್ ಪೈಪ್ ಗಳ ಜೋಡಣೆಯ ಪೂಜಾ ಕಾರ್ಯಕ್ರಮ ಸೋಮವಾರ ಅರಟಾಳ ಕ್ರಾಸ್ ಹತ್ತಿರ ಜರುಗಿತು. ಮಾಜಿ ಉಪ ಮುಖ್ಯಮಂತ್ರಿಗಳು ಹಾಲಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಎಂ ಎಸ್ ಪೈಪುಗಳು ಜೋಡಣೆ ಪೂಜಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಹುದಿನಗಳ ಬೇಡಿಕೆಯಾದ ಅಮ್ಮಾಜೇಶ್ವರಿ ಕೊಟ್ಟಲಗಿ ಏತ್ ನೀರಾವರಿ ಯೋಜನೆ ಪ್ರಾರಂಭವಾಗಿದೆ.

ಈ ಭಾಗದ ರೈತರಿಗೆ ಮುಂದಿನ ಡಿಸೆಂಬರ ಒಳಗಡೆ ನೀರು ಒದಗಿಸುವ ಸಂಕಲ್ಪವನ್ನು ಮಾಡಿದ್ದೇವೆ ರೈತರು ಸಹಕಾರ ನೀಡಬೇಕು ಯೋಜನೆಯಲ್ಲಿ ರೈತರ ಜಮೀನಿನಲ್ಲಿ ಪೈಪ್ಲೈನ್ ಕೆಲಸ ಪ್ರಾರಂಭವಾಗಿದೆ ಯಾರೂ ಕೂಡ ಅಡಚಣೆ ಮಾಡದೆ ಕಾಮಗಾರಿ ಮಾಡುವ ವರ್ಗಕ್ಕೆ ಸಹಾಯ ಸಹಕಾರ ನೀಡಬೇಕೆಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಈ ಒಂದು ಯೋಜನೆಯಿಂದ ಸುಮಾರು ಏಳು ರಿಂದ ಹತ್ತು ಗ್ರಾಮಗಳಾದ ಐಗಳಿ. ತೆಲಸಂಗ ಕೊಟ್ಟಲಗಿ ಕಕಮರಿ ಅರಟಾಳ ಬಾಡಗಿ ಪಡತರವಾಡಿ ಕನ್ನಾಳ ಬನ್ನೂರ ಗ್ರಾಮದ ರೈತರ ಬಾಳು ಬಂಗಾರವಾಗಲಿದೆ.

ಈ ಯೋಜನೆಗೆ ಸುಮಾರು ಹದಿನಾಲ್ಕು ನೂರು ಆರವತ್ತು ಕೋಟಿ ರೂಪಾಯಿಗಳು ವೆಚ್ಚವಾಗಲಿದೆ ಅತ್ಯಂತ ಗುಣಮಟ್ಟ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಸಾಗಿದೆ. ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿದೆ ಈ ಎಲ್ಲ ಕಾಯ೯ಗಳು ಸರಳವಾಗಿ ಆಗಲೆಂದು ದೇವಿಗೆ ಪೂಜೆ ಸಲ್ಲಿಸಿದ್ದೇವೆ ಎಂದರು. ಕೆಲವರು ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ ಅವರ ಟೀಕೆಗೆ ನಾವು ಉತ್ತರ ನೀಡಲು ಸಮಯವಿಲ್ಲ ನಮ್ಮ ಕಾರ್ಯ ನಾವು ಮಾಡಬೇಕು ಎಂದರು .ಸಂದರ್ಭದಲ್ಲಿ ಕಾಂಗ್ರಸ್ ಮುಖಂಡ ಸದಾಶಿವ ಬೂಟಾಳಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗುರಪ್ಪ ದಾಶ್ಯಾಳ ಸಿದರಾಯ ಯಲಹಡಗಿ ಹಾಗೂ ಸಿ ಎಸ್ ನೇಮಗೌಡ. ಆರ್ ಆರ್ ತೆಲಸಂಗ ಶಾಂತಿನಾಥ ಶಿವು ಗುಡ್ಡಾಪೂರ ನ್ಯಾಯವಾದಿಗಳಾದ ಅಮೋಘ ಖೋಬ್ರಿ ಸೇರಿದಂತೆ ನೀರಾವರಿ ಇಲಾಖೆ ಇಂಜೀನಿಯರ್ ಪ್ರವೀಣ ಹುಣಸಿಕಟ್ಟಿ ಮುಂತಾದವರು ಉಪಸ್ಥಿತಿ ಇದ್ದಯ ಐಗಳಿ ಪೋಲಿಸ್ ಠಾಣೆ ಪಿಎಸ್ ಐ ಚಂದ್ರಸೇಖರ ಸಾಗನೂರ ಹಾಗೂ ಸಿಬ್ಬಂದಿಗಳು ಇದ್ದರು.

 ವರದಿ:- ಆಕಾಶ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!