Ad imageAd image

ಸಿಂಧನೂರು ನಗರ ಪೊಲೀಸರ ವಿಶೇಷ ಕಾರ್ಯಾಚರಣೆ. ಬಂಗಾರದ ಭರ್ಜರಿ ಬೇಟೆ

Bharath Vaibhav
ಸಿಂಧನೂರು ನಗರ ಪೊಲೀಸರ ವಿಶೇಷ ಕಾರ್ಯಾಚರಣೆ. ಬಂಗಾರದ ಭರ್ಜರಿ ಬೇಟೆ
WhatsApp Group Join Now
Telegram Group Join Now

ಸಿಂಧನೂರು : ನಗರ ಪೊಲೀಸರ ವಿಶೇಷ ಕಾರ್ಯಚರಣೆಯಲ್ಲಿ 2 ಕೆ.ಜಿ 05 ತೊಲೆ ಬಂಗಾರದ ಆಭರಣಗಳು ಹಾಗೂ ನಗದು ಹಣ ವಶ ದಿನಾಂಕ 12.10.2024 ಸಿಂಧನೂರು ನಗರದ ಜೈನ್ ಧರ್ಮ ಶಾಲೆಯ ಕೊಣಿಯ ಕಪಾಟಿನಲ್ಲಿ ಇದ್ದ 1483.77 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿದ್ದು ಈ ಬಗ್ಗೆ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ನಂ164/2024 ಕಲಾಂ :316(2).318(4)303(2)305 ಬಿ ಎನ್ ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 20.10.2024 ರಂದು ಆರೋಪಿ ನಿರ್ಮಲ್ ಕುಮಾರ ಜೈನ್ ಈತನನ್ನು ಹಿಡಿದು ಅವನ ಕಡೆಯಿಂದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನ ನಂ 164/2024 ಪ್ರಕರಣಕ್ಕೆ ಸಂಬಂಧಿಸಿದಂತೆ 2056 ಗ್ರಾಂ ಬಂಗಾರದ ಆಭರಣಗಳು ಅಂಕಿ 1.43.92.000/- ಒಂದು ಕೋಟಿ 43 ಲಕ್ಷ 92 ಸಾವಿರ ಹಾಗೂ ನಗದು ಹಣ 40.150/- ಒಟ್ಟು ರೂ 1.44.32.150/- ಒಂದು ಕೋಟಿ 44.ಲಕ್ಷ. 32 ಸಾವಿರ 150 ರೂ ಬೆಲೆ ಬಾಳುವ ಬಂಗಾರ ಆಭರಣಗಳು ಹಾಗೂ ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣವನ್ನು ಭೇದಿಸಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಬಂಗಾರದ ಆಭರಣ ಕಳ್ಳತನ ಪ್ರಕರಣ ವರದಿಯಾಗಿದ್ದರಿಂದ ಪತ್ತೆ ಮಾಡುವ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರು ರಾಯಚೂರು. ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು -1&2 ರಾಯಚೂರು, ಡಿಎಸ್ಪಿ ಸಿಂಧನೂರು ಅವರ ಮಾರ್ಗದರ್ಶನದಲ್ಲಿ ದುರುಗಪ್ಪ.ಡಿ. ಪಿ ಐ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರಾದ, ಎರಿಯಪ್ಪ ಪಿಎಸ್ಐ (ಕಾಸು) ಬಳಗನೂರು, ಠಾಣೆ ಸಿಬ್ಬಂದಿಯವರಾದ. ಆದಯ್ಯ ಪಿ ಸಿ- ಶರಣಪ್ಪ ರೆಡ್ಡಿ. ಪಿ ಸಿ ಸಂಗನಗೌಡ ಪಿ ಸಿ. ಸಿದ್ದಪ್ಪ ಪಿ ಸಿ. ಖಲೀಲ್ ಪಾಶ. ಪಿಸಿ. ಶರಣಬಸವ ಪಿ ಸಿ. ಅಫಿ ಜುಲ್ಲಾ. ಪಿ ಸಿ ವೀರಭದ್ರಪ್ಪ.ಪಿಸಿ. ಅನಿಲ್ ಕುಮಾರ್. ಪಿಸಿ.ಹಜರತ್ ಅಲಿ. ಹೆಚ್. ಸಿ.ಜಿ. ಪ್ರಕಾಶ್ ಪಿ ಸಿ.ಭಾಷಾ ನಾಯಕ್ ಹೆಚ್ ಸಿ. ಹಾಜಿಂಪಾಶ. ಸಿಡಿಆರ್ ವಿಭಾಗ ರಾಯಚೂರು ರವರ ವಿಶೇಷ ತಂಡವನ್ನು ರಚಿಸಲಾಗಿತ್ತು ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಹಗಲಿರುಳು ಶ್ರಮಿಸಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಆರೋಪಿತನಾದ ನಿರ್ಮಲ್ ಕುಮಾರ ಜೈನ್ ಇವರನ್ನು ಬಂಧಿಸಿದ್ದು ಸದರಿ ಕಳ್ಳತನ ಪತ್ಯ ಕಾರ್ಯವನ್ನು ಮಾನ್ಯ ಎಸ್‌.ಪಿ ರಾಯಚೂರು ಮತ್ತು ಮಾನ್ಯ ಹೆಚ್ಚುವರಿ ಎಸ್ ಪಿ-1 ರಾಯಚೂರು ಹಾಗೂ ಮಾನ್ಯ ಹೆಚ್ಚುವರಿ ಎಸ್ಪಿ-2 ರಾಯಚೂರು ರವರು ಶ್ಲಾಘನೆ ಮಾಡಿ ಪತ್ತೆ ಮಾಡಿದ ತಂಡಕ್ಕೆ ಬಹುಮಾನ ಘೋಷಣೆ ಮಾಡಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರು ರಾಯಚೂರು ರವರು ತಿಳಿಸಿದ್ದಾರೆ,
ವರದಿ :ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!