Ad imageAd image

ಚಮಕೇರಿ ಗ್ರಾ. ಪಂ. ಅಧ್ಯಕ್ಷರಾಗಿ ಜಯಶ್ರೀ ಯಳ್ಳೂರ ಅವಿರೋಧವಾಗಿ ಆಯ್ಕೆ

Bharath Vaibhav
ಚಮಕೇರಿ ಗ್ರಾ. ಪಂ. ಅಧ್ಯಕ್ಷರಾಗಿ ಜಯಶ್ರೀ ಯಳ್ಳೂರ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಅಥಣಿ:- ಚಮಕೇರಿ ಗ್ರಾಮ ಪಂಚಾಯತಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಜಯಶ್ರೀ ಧರ್ಮಣ್ಣ ಯಳ್ಳೂರ ಅವಿರೋಧವಾಗಿ ಆಯ್ಕೆಯಾದರು.ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಬಸವರಾಜ ಕಾಡಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಈ ಚುನಾವಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಸವರಾಜ ಪಾಟೀಲ, ಚಮಕೇರಿ ಹಾಗೂ ಬೇಡರಹಟ್ಟಿ ಗ್ರಾಮಗಳ ಒಳಗೊಂಡ ಗ್ರಾಮ ಪಂಚಾಯತಿಗೆ ಚಮಕೇರಿ ಗ್ರಾಮದ ಶ್ರೀಮತಿ ಜಯಶ್ರೀ ಧರ್ಮಣ್ಣ ಯಳ್ಳೂರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಈ ಅವಿರೋಧ ಆಯ್ಕೆಗೆ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಕಾಂತ ಇಮ್ಮಡಿ ಸೇರಿದಂತೆ ಚಮಕೇರಿ ಹಾಗೂ ಬೇಡರಹಟ್ಟಿ ಗ್ರಾಮದ ಮುಖಂಡರು ಶ್ರಮಿಸಿದ್ದಾರೆ ಎಂದ ಅವರು ಗ್ರಾಮ ಪಂಚಾಯತ ಆಡಳಿತದ ಮೂಲಕ ಗ್ರಾಮಗಳಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದರು.

ಅವಿರೋಧ ಆಯ್ಕೆಗೆ ಡಾ. ಸದಾಶಿವ್ ಕಾಗವಾಡ ಶ್ರೀಕಾಂತ ಪಾಟೀಲ, ಕಾಂತಗೌಡ ಪಾಟೀಲ. ವಿಠಲ್ ಸತ್ತಿ ಸದಾಶಿವ ಬಿರಾದಾರ. ಪರಶು ಬಿರಾದಾರ. ಮಾದೇವ ಮಾನೆ. ಮುದುಕಪ್ಪ ಮೊಕಾಶಿ, ಧರ್ಮಣ್ಣ ಯಳ್ಳೂರ, ಮಾರುತಿ ಜಾಧವ, ಬಾಬು ಜಾಧವ, ಬಾಬು ಜನವಾಡ. ಇದರ ಗುರುಸಿದ್ಧ ಕೊಡಗನೂರ. ಶಿವಾಜಿ ಸೂರ್ಯವಂಶಿ. ಶ್ರಮಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ್ ಕಲ್ಲಾಪುರ್ ಹಾಗೂ ವ್ಯವಸ್ಥಾಪಕರು ಜಿ.ಎಂ. ಸ್ವಾಮಿ. ನವೀನ ಹಿರೇಮಠ. ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿಧರ ಮಾಲಗಾರ. ದಿನಕರ್ ದಾಮಪುರೆ. ಕಾರ್ಯನಿರ್ವಹಿಸಿದರು.ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪೊಲೀಸ್ ಇಲಾಖೆ ಪಾಲ್ಗೊಂಡಿದ್ದರು.

ವರದಿ: -ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!