Ad imageAd image

ರೈತರ ಬೆಳೆಗಳು ಅಪಾರ ನಷ್ಟವಾಗಿವೆ ಜನಪ್ರತಿನಿಧಿಗಳು ಅಧಿಕಾರಿಗಳು ರೈತರನ್ನು ಕಡೆಗಣಿಸಬೇಡಿ ಪರಿಹಾರವನ್ನು ನೀಡಿ. ಮಲ್ಲಹಳ್ಳಿ ರವಿ ಕುಮಾರ್

Bharath Vaibhav
ರೈತರ ಬೆಳೆಗಳು ಅಪಾರ ನಷ್ಟವಾಗಿವೆ ಜನಪ್ರತಿನಿಧಿಗಳು ಅಧಿಕಾರಿಗಳು ರೈತರನ್ನು ಕಡೆಗಣಿಸಬೇಡಿ ಪರಿಹಾರವನ್ನು ನೀಡಿ. ಮಲ್ಲಹಳ್ಳಿ ರವಿ ಕುಮಾರ್
WhatsApp Group Join Now
Telegram Group Join Now

ಮೊಳಕಾಲ್ಮುರು:- ತಾಲ್ಲೂಕಿನಲ್ಲಿಅತಿ ಹೆಚ್ಚಿನ ಮಳೆಯಾಗಿದ್ದು ಜನರ ಜೀವನ ಅಸ್ತವ್ಯಸ್ತವಾಗಿದೆ, ಮೊಳಕಾಲ್ಮುರು ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅತೀ ಹೆಚ್ಚು ರೈತರ ಹೊಲಗಳಲ್ಲಿ ಬೆಳೆಗಳು ಕೊಚ್ಚಿ ಹೋಗಿದ್ದು ಎಷ್ಟು ಮನೆಗಳು ಜಲಾವೃತವಾಗಿವೆ ಅಪಾರ ನಷ್ಟವಾಗಿದೆ ಇತ್ತ ಅಧಿಕಾರಿಗಳು ಗಮನಿಸಬೇಕು ಎಂದು ರೈತ ಸಂಘ ಅಧ್ಯಕ್ಷ ರವಿಕುಮಾರ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಬುಧುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟ ನಡೆಸಿ ಮಾತನಾಡಿದರು.
ತಾಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಹೆಚ್ಚಿನ ಮಳೆಯಾಗಿದ್ದು ಅಪಾರ ಬೆಳೆ ನಷ್ಟವಾಗಿದೆ.

ಇದಕ್ಕೆ ಸಂಬಂಧಪಟ್ಟಂತಹ ತಾಲ್ಲೂಕು ಆಡಳಿತ ಅಧಿಕಾರಿಗಳು ಕೃಷಿ ಅಧಿಕಾರಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳು ಇತ್ತ ಗಮನ ಹರಿಸದೆ ಕಾಲಹರಣ ಮಾಡುತ್ತಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಶೇಂಗಾ ತೊಗರಿ ಮೆಕ್ಕೆಜೋಳ ಹೆಚ್ಚು ಬೆಳೆಯುತ್ತಿದ್ದು ಅಪಾರ ನಷ್ಟವಾಗಿದೆ. ಸಾವಿರಾರು ರೈತರಿಗೆ ಲಕ್ಷಗಟ್ಟಲೆ ನಷ್ಟವಾಗಿದೆ. ಇಂತಹ ನಷ್ಟಕ್ಕೆ ಅಧಿಕಾರಿಗಳು ಸರ್ಕಾರದಿಂದ ನಷ್ಟ ಬರಿಸಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಬಿ ನಿಜಲಿಂಗಪ್ಪ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷಅತೀ ಹೆಚ್ಚು ಮಳೆಯಾಗಿರುವುದಕ್ಕೆ ಸಂತೋಷವಾಗುತ್ತದೆ, ಅದರ ಜೊತೆಯಲ್ಲಿ ಅತೀ ಹೆಚ್ಚು ಮಳೆಯ ಪರಿಣಾಮ ಎಷ್ಟೋ ಬೆಳೆಗಳು ನಷ್ಟವಾಗಿವೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇಲ್ಲಿಯ ತನಕ ಸರ್ವೆ ಕಾರ್ಯ ಮುಗಿದಿಲ್ಲ. ಎಲ್ಲಾ ರೈತರಿಗೆ ನಷ್ಟ ಪರಿಹಾರ ಪಡೆದು ಕೊಳ್ಳಲು ಸಹಕಾರಿಯಾಗುತ್ತದೆ. ಕಂದಾಯ ಅಧಿಕಾರಿಗಳ ನಿರ್ಲಕ್ಷದಿಂದ ಸಕಾಲಕ್ಕೆ ನಷ್ಟ ಪರಿಹಾರ ಪಡೆಯಲು ಸಾಧ್ಯವಿಲ್ಲ ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಸಾರಿ ಕೂಡ ನಮ್ಮ ತಾಲೂಕಿನಲ್ಲಿ ಭೇಟಿಯಾಗಿಲ್ಲ. ರೈತರ ಕಷ್ಟ ಕೇಳುತ್ತಿರುವುದು ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವರ ಹಾಕಿದರು.

ಪ್ರತಿಭಟನೆಯಲ್ಲಿ ಡಿ ಸಿ ನಾಗರಾಜ್, ಬಸವರಾಜ್ ಮರ್ಲಳ್ಳಿ ಪಾಪಣ್ಣ, ಮಲ್ಲಳ್ಳಿ ಅಜ್ಜಣ್ಣ ಈರಣ್ಣ,ಪಿ ಟಿ ಮುಕ್ಕಣ್ಣ ತಿಪ್ಪೇಶಿ,ಶಿವಪ್ಪ ದೊಡ್ಡ ಸೂರಯ್ಯ, ರಾಮ ಭಜಪ್ಪ, ಪ್ರಕಾಶ್ ಹಾಗೂ ರೈತರು ಭಾಗವಹಿಸಿದ್ದರು.

ವರದಿ :-ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!