Ad imageAd image

ವಿಜಯೋತ್ಸವದಲ್ಲಿ ಚನ್ನಮ್ಮನ ಅಭಿಮಾನಿಗಳ ಮನಗೆದ್ದ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ..

Bharath Vaibhav
ವಿಜಯೋತ್ಸವದಲ್ಲಿ ಚನ್ನಮ್ಮನ ಅಭಿಮಾನಿಗಳ ಮನಗೆದ್ದ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ..
WhatsApp Group Join Now
Telegram Group Join Now

ಕಿತ್ತೂರು:- ಇಂದಿನಿಂದ ಕ್ರಾಂತಿನಾಡು ಕಿತ್ತೂರಿನಲ್ಲಿ ಇಂದಿನಿಂದ 3 ದಿವಸಗಳ ಕಾಲ ನಡೆಯುವ ಚನ್ನಮ್ಮನವರ 200 ನೇ ವಿಜಯೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಕ್ಶ್ಮೀ ಹೆಬ್ಬಾಳಕರ್ ಮತ್ತು ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಚಾಲನೆ ನೀಡಿ ನಮ್ಮ ನ್ಯೂಸ್ ಸಮೂಹದೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇಂತಹ ಸಂದರ್ಭದಲ್ಲಿ ಕಿತ್ತೂರು ಕೋಟೆಯ ಗ್ರಾಮದೇವತೆ ದೇವಸ್ಥಾನ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರದರ್ಶನ ಗೊಳ್ಳಲಾದ ಫಲ ಪುಷ್ಪ ಪ್ರದರ್ಶನ ಕಿತ್ತೂರು ಅಭಿಮಾನಿಗಳ ಗಮನ ಸೆಳೆಯಿತು. ಈ ಪ್ರದರ್ಶನವನ್ನು ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜು ಹಟ್ಟಿಹೊಳಿ, ಶಾಸಕ ರಾಜು ಸೆಟ್ ಹಾಗೂ ಜಿಲ್ಲಾಧಿಕಾರಿ ಮಹಮದ್ ರೋಷನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ್ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಮುರುಗೋಡು ಜಂಟಿಯಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನದ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿನ್ಯಾಸಗಾರ್ತಿ ಗೌರಿ ಇದರ ಬಗ್ಗೆ ಮಾಹಿತಿ ನೀಡಿದರು ಹಾಗೂ kpcc ಸದಸ್ಯೆ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಈ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿನ್ಯಾಸ ಗಾರ್ತಿ ಗೌರಿ ಸೇರಿದಂತೆ ಎಲ್ಲರನ್ನು ಸನ್ಮಾನ ಮಾಡಲಾಯಿತು. ಈ ಫಲಪುಷ್ಪ ಪ್ರದರ್ಶನದಲ್ಲಿ ಸಿರಿದಾನ್ಯಗಳಿಂದ ರಚನೆ ಮಾಡಲಾದ ಗರಗದ ಮಡಿ ವಾಳಜ್ಜನ ಪ್ರತಿಮೆ, ರಂಗೋಲಿ ಹಾಗೂ ಮರಳಿನಲ್ಲಿ ವಿನ್ಯಾಸ ಗೊಳಿಸಲಾದ ಚನ್ನಮ್ಮನವರ ಪ್ರತಿಮೆಗಳು ಗಮನ ಸೆಳೆದವು. ಒಟ್ಟಾರೆ 200 ನೇ ವಿಜಯೋತ್ಸವದ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಆಕರ್ಷಕವಾಗಿ ಚನ್ನಮ್ಮನ ಅಭಿಮಾನಿಗಳ ಗಮನ ಸೆಳೆಯಿತು.

  ವರದಿ:-ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!