Ad imageAd image

ಗುಡ್‌ ನ್ಯೂಸ್‌ ಕಾಲೇಜಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ಜಯಂತೋತ್ಸವ ಆಚರಣೆ

Bharath Vaibhav
ಗುಡ್‌ ನ್ಯೂಸ್‌ ಕಾಲೇಜಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ಜಯಂತೋತ್ಸವ ಆಚರಣೆ
WhatsApp Group Join Now
Telegram Group Join Now

ಕಲಘಟಗಿ: -ಪಟ್ಟಣದ ಗುಡ್‌ ನ್ಯೂಸ್‌ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದಿನಾಂಕ 23-10-2024 ರಂದು ಆಯ್ ಕ್ಯೂ ಎ ಸಿ ಅಡಿಯಲ್ಲಿ ಎನ್‌ ಎಸ್‌ ಎಸ್‌ ಘಟಕ, ಇತಿಹಾಸ ವಿಭಾಗ ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 200 ನೇ ಕಿತ್ತೂರು ವಿಜಯೋತ್ಸವ ಆಚರಿಸಲಾಯಿತು. ವೇದಿಕೆ ಮೇಲಿನ ಗಣ್ಯರು ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಗುಡ್‌ ನ್ಯೂಸ್‌ ಸಂಸ್ಥೆಯ ಖಜಾಂಚಿಯಾದ ರೆ. ಬ್ರ ಸಿರಿಲ್‌ ಅವರು ಮಾತನಾಡಿ ದೇಶದ ಸ್ವತಂತ್ರ ಹೋರಾಟದಲ್ಲಿ ಮಹಿಳೆಯರ ಪಾತ್ರ ಹಿರಿದಾದದ್ದು, ಅದರಲ್ಲೂ ಕಿತ್ತೂರು ರಾಣಿ ಚೆನ್ನಮ್ಮಾಳ ಹೋರಾಟ ಅದ್ವಿತೀಯವಾಗಿದೆ ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವರಿಕೆ ಮಾಡಿದರು. ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಮತ್ತು ಹೋರಾಟದ ಕುರಿತು ವಿದ್ಯಾರ್ಥಿನಿಯರಾದ ಕುಮಾರಿ ಸೌಂದರ್ಯ ಚಿಕ್ಕಮ್ಮನವರ ಮತ್ತು ಮಂಜುಳಾ ಹುಬ್ಬಳ್ಳಿ ಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ರೆ. ಬ್ರ ಲಿಯೋ, ಪ್ರಾಚಾರ್ಯರಾದ ಡಾ. ಮಹೇಶ ಧ ಹೋರಕೇರಿ, ಶ್ರೀಮತಿ ಕುಲ್ಸುಂಬಿ ಶೇಕ್‌, ಮಹಿಮಾ ಪುಜಾರ, ಶ್ರೀ ಮಹಾಂತೇಶ ನಿಂಬಣ್ಣವರ, ಶೀ ಅಲೇಕ್ಷ್‌ ಪ್ರಭು, ನೀಲಮ್ಮ ನೆನಕ್ಕಿ, ಶ್ರೀ ಶಶಿಕುಮಾರ ಕಟ್ಟಿಮನಿ, ಶ್ರೀ ಶಶಿಧರ ಹೆಬ್ಬಳ್ಳಿಮಠ, ಸಂದ್ಯಾ ಗಾಂವಕರ್‌, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ಸರಸ್ವತಿ ಗುಡಿನವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀ ಎಂ. ಬಿ ಉಳ್ಳಾಗಡ್ಡಿ ಸ್ವಾಗತಿಸಿದರು. ಶೀ ರೈಮಾನಸಾಬ ಗೋಲಳ್ಳಿ ವಂದಿಸಿದರೆ ಆಕ್ಷತಾ ಕುಬ್ಯಾಳ ನಿರೂಪಿಸಿದರು.

ವರದಿ:- ನಿತೀಶ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!