Ad imageAd image

ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಿಸಲಾಯಿತು.

Bharath Vaibhav
ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಿಸಲಾಯಿತು.
WhatsApp Group Join Now
Telegram Group Join Now

ಧಾರವಾಡ :-ಹುಬ್ಬಳ್ಳಿಯ ಬೈರಿದೇವರಕೊಪ್ಪ ದಲ್ಲಿ ರಾಷ್ಟ್ರಮಾತೇ ಕಿತ್ತೂರ ರಾಣಿ ಚನ್ನಾಮಾಜಿಯವರ 200ನೇ ವಿಜಯೋತ್ಸವ ಹಾಗೂ 246ನೇ ಜಯಂತೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಮತ್ತು ಬೈರಿದೇವರಕೊಪ್ಪದಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಮುಖಾಂತರ ಹುಬ್ಬಳ್ಳಿ ರೈಲ್ವೆ ಎರಡನೆಯ ಗೇಟ್ ನಲ್ಲಿ ಇರುವಂತಹ ಚೆನ್ನಮ್ಮನ ಮೂರ್ತಿ ವರಿಗೆ ಸೈಕಲ್ ಮೋಟಾರ್ (ಬೈಕ್ ) ರಾಲಿಯನ್ನು ಮಾಡಿ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು ಬ್ರಿಟಿಷ್ ರಿಗೆ ಮೊಟ್ಟಮೊದಲು ಸೋಲಿನ ರುಚಿ ತೋರಿಸಿದ್ದು ರಾಷ್ಟ್ರ ಮಾತೇ ಚನ್ನಮ್ಮಾಜಿ.ಜೊತೆಗೆ ಚನ್ನಮ್ಮನ ಜೊತೆಗೆ ಅಮಟೂರ ಬಾಳಪ್ಪ ಸಂಗೊಳ್ಳಿ ರಾಯಣ್ಣ ತಾಯಿ ಮಗನ ಸಂಬಂಧ ಹೊಂದಿದ್ದರು.

ಅದರಂತೆ ಕಿತ್ತೂರು ವಿಜಯೋತ್ಸವದ ಪ್ರಮುಖ ರೂವಾರಿ ಎಂದರೆ ಅದು ಅಮಟೂರ ಬಾಳಪ್ಪ. ಚನ್ನಮ್ಮನ ಪ್ರಮುಖ ಅಂಗರಕ್ಷಕನಾಗಿದ್ದು, ರಣರಂಗದಲ್ಲಿ ಹೋರಾಡುತ್ತಲೆ ಬ್ರಿಟಿಷ್ ಅಧಿಕಾರಿ ಥ್ಯಾಂಕರೆ ಗುಂಡು ಚನ್ನಮ್ಮನಿಗೆ ತಾಗುವುದನ್ನು ತಪ್ಪಿಸಿದ್ದರು. ಮತ್ತೊಂದು ಕಡೆ ಥ್ಯಾಕರೆ ಎದೆಗೆ ನೇರವಾಗಿ ಗುಂಡಿಟ್ಟು ಬೇಟೆಯಾಡುವ ಮೂಲಕ ಇಡೀ ದೇಶದಲ್ಲೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಕಿತ್ತೂರು ಗೆಲುವು ಸಾಧಿಸುವಂತೆ ಮಾಡಿದರು. ಹಾಗೆ ಇಂಥ ವಿಷಯಗಳನ್ನ ನೆನಪು ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿದಾಗ ಮಾತ್ರ ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಲು ಸಾಧ್ಯ ಎಂಬುವಂತ ಸಂದೇಶವನ್ನು ನೀಡಿದರು.

ಭೀಮರಾಯ ರಾಯಪುರ ಸಂಗನಗೌಡ ಹೂವನ್ನವರ ಎಸ್ ಕೆ ಕೊಟ್ರೇಶ್ ವಿನೋದ್ ಅಲ್ಲಾಡಿ ಜಗದೀಶ್ ಬಳ್ಳಾರಿ ಶಿವಾನಂದ್ ಮಾಯಕಾರ ಬಸವರಾಜ್ ಬಳೆಗಾರ ಚಂದ್ರು ಹಾದಿಮನಿ ಕಿರಣ ಮೆಣಸಗಿ ಜಯದೇವ ದೊಡ್ಡಮನಿ ಜೈಪ್ರಕಾಶ ಅಕ್ಕಿಹೊಳಿ ಪ್ರಮೋದ್ ಅಲ್ಲಾಡಿ ಬಸವರಾಜ ಹೆಬ್ಬಳ್ಳಿ ಬಸವರಜ್ ಮಾಯಕಾರ ಮಲ್ಲಿಕಾರ್ಜುನ ಗುಡ್ಡಪ್ಪನವರ ಪ್ರಕಾಶ ಮಾಯಕಾರ ಅಜ್ಜಪ್ಪ ರಾಯಪುರ ರವೀಂದ್ರ ಹರ್ತಿ ಸಿದ್ದೇಶ ಕಬಾಡರ ಎಸ್ ಎಸ್ ಗಚ್ಚಿನವರ ಭೀಮಪ್ಪ ಗಾಳಪ್ಪನವರ ಸಂತೋಷಗೌಡ ಕಂಠೆಪ್ಪಗೌಡ್ರ ಕಿಶೋರ ಶಿರಸಂಗಿ ದೇವನಗೌಡ ಪಾಟೀಲ ಗದಿಗೆಪ್ಪ ಮಾಯಕಾರ ಪ್ರೀತಮ ಅಸುಂಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ:- ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!