Ad imageAd image

(ಕೆ. ಎ .ಬಿ .) ಅಕ್ರಮ್ ಸಕ್ರಮ ರೈತರ ಟಿಸಿ ಕುಡರಿಸುವಲ್ಲಿ ಎಸ್ ಓ ಅಧಿಕಾರಿಯಿಂದ ಭ್ರಷ್ಟಾಚಾರದ ಆರೋಪ.

Bharath Vaibhav
(ಕೆ. ಎ .ಬಿ .) ಅಕ್ರಮ್ ಸಕ್ರಮ ರೈತರ ಟಿಸಿ ಕುಡರಿಸುವಲ್ಲಿ ಎಸ್ ಓ ಅಧಿಕಾರಿಯಿಂದ ಭ್ರಷ್ಟಾಚಾರದ ಆರೋಪ.
WhatsApp Group Join Now
Telegram Group Join Now

ಚಿಕ್ಕೋಡಿ :-ತಾಲೂಕಿನ ಕರೋಶಿ ಗ್ರಾಮದಲ್ಲಿ ರೈತರ ಗಂಭೀರ ಆರೋಪ ರೈತರಿಗೆ ಅಕ್ರಮ ಸಕ್ರಮ್ ಸ್ಕೀಮನಲ್ಲಿ ಬಂದಿರತಕ್ಕಂತ ಟಿ ಸಿಗಳನ್ನು ರೈತರಿಗೆ ಮುಟ್ಟಿಸುವಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ರೈತರು ಗಂಭೀರ ಮಾಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ರೈತರಾದ ಶ್ರೀ ಅರ್ಜುನ್ ಅಪ್ಪಣ್ಣಾ ಝಟಾಳೆ, 2014/15ರಲ್ಲಿ ಅಕ್ರಮ್ ಸಕ್ರಮ ಟಿಸಿಗಾಗಿ ವಿದ್ಯುತ್ ಇಲಾಖೆಗೆ ಆನ್ಲೈನ್ ಮುಖಾಂತರ ಅರ್ಜಿ ಹಾಕಲಾಗಿತ್ತು.

ಅದರಂತೆ ಆ ಟಿ ಸಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಇಲಾಖೆಯಿಂದ 2017ರಲ್ಲಿ ಮಂಜೂರಾತಿ ಯಾಗಿತ್ತು ಈ ರೈತರಿಗೆ ಸೇರಿರುವ ಸರ್ವೇ ನಂಬರ್ 594 ಅರ್ಜುನ್ ಅಪ್ಪಣ್ಣಾ ಝುಟಾಳೆ ಎಂಬುವರ ಎಸ್ಟಿಮೇಟ್ ಪ್ರಕಾರ ಜಮೀನಿನಲ್ಲಿ ಟಿ ಸಿ ಆರ್ ಆರ್ ಕ್ರಮಾಂಕ 37394 ಈ ಟಿಸಿ ಕುಡರಿಸಬೇಕಾಗಿತ್ತು.ಆದರೆ ಆ ಟಿ ಸಿ ಬೇರೆ ಕಡೆ ಬೇರೆಯವರ ಸರ್ವೇ ನಂಬರದಲ್ಲಿ ಕೂಡರಿಸಲಾಗಿದೆ ಎಂದು ಗಂಭೀರವಾಗಿ ಆರೋಪ ಮಾಡಿರುವ ರೈತ.

ರೈತನ ಪ್ರಶ್ನೆ ನಮ್ಮ ಬಳಿ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಸಾವಿರಾರು ರೂಪಾಯಿ ದುಡ್ಡು ಕಟ್ಟಿ ಟಿಸಿ ಸ್ಯಾಂಕ್ಷನ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋರ್ವೆಲ, ಬಾವಿ, ತೆಗೆದು ನೀರಿಗಾಗಿ ರೈತನು ತುಂಬಾ ನೊಂದು ಸರ್ಕಾರದ ಕೆಲವು ಸವಲತ್ತುಗಳಿಗೆ ಕೈಜೋಡಿಸುತ್ತಾನೆ.

ಆದರೆ ಇಂತಹ ಕೆಲವು ಭ್ರಷ್ಟ ಅಧಿಕಾರಿಗಳು ಅನ್ನದಾತನ ಕೈ ಮುರಿಯುವ ಹಲಕಾ ಕೆಲಸ ಮಾಡುವ ಕೆಲವು ಅಧಿಕಾರಿ ಇಂತಹ ಇಲಾಖೆಯಲ್ಲಿ ಇದ್ದಾರೆ ಆದ್ದರಿಂದ ನಮ್ಮ ಮನಸ್ಸಿಗೆ ತುಂಬಾ  ಬೇಜಾರುವಾಗುತ್ತಿದೆ.ಅದಕ್ಕಾಗಿ ಹಲವಾರು ರೈತರು ಕಂಗಾಲಾಗುತ್ತಿದ್ದಾರೆ ಸಂತನ್ ಫೆರಾರೆ ಅಂತಹ ಎಸ್. ಓ ಅಧಿಕಾರಿ 2014/ 15 /17 ಅಧಿಕಾರಿ ಅಲ್ಲಿ ಇರುವಾಗ ಸುಮಾರು ರೈತರಿಗೆ ಈ ರೀತಿಯಾಗಿ ಅಕ್ರಮ ಮತ್ತು ಅನ್ಯಾಯ ಮಾಡಿರುವ ಆರೋಪವಿದೆ.

ಅದಕ್ಕಾಗಿ ಮೇಲಾಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗೆ ಮುಟ್ಟುಗೊಲು ಹಾಕಿ ಆತನ ಅಕ್ರಮ ಆಸ್ತಿ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ.ಈಗ ಹಲವು ರೈತರು ರೊಚ್ಚಿಗೆದ್ದು ಈ ವಿಷಯ ಕುರಿತು ಆರ್‌.ಟಿ.ಐ. ದಲ್ಲಿ ಎ. ಇ. ಇ. ಮೇಡಂ ಅವರಿಗೆ ಮಾಹಿತಿ ಕೇಳಲಾಗಿತ್ತು. ಅವರು ಹೌದು ಇದು ಆ ಸೆಕ್ಷನ್ ಆಫೀಸರ್ ಮಾಡಿದ ತಪ್ಪು ಎಂದು ಉತ್ತರ ಲೆಟರ್ ಮುಖಾಂತರ ಉತ್ತರ ನೀಡಿದ್ದರು ಮೇಡಂ ಕೂಡ ಯಾಕೆ ಮುಂದೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ರೈತರದ್ದು.

ತಕ್ಷಣವೇ ಇನ್ನಾದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಎಸ್ ಓ ಮಾಡಿರುವ ಅಕ್ರಮ ಪರಿಶೀಲನೆ ನಡೆಸಿ ರೈತರಿಗೆ ಮುಗ್ಧ ರೈತರಿಗೆ ನ್ಯಾಯ ದೊರಕಿಸ ಬೇಕಿದೆ.ಈ ರೀತಿಯಾಗಿ ರೈತನನ್ನು ಕಾಡುತ್ತಿದ್ದರೆ ಮುಂದಿನ ದಿನಮಾನಗಳಲ್ಲಿ ರೈತರು ಅಕ್ರೋಶಗೊಳ್ಳಲು ಕಾರಣ ಇಂಥ ಬ್ರಷ್ಟ ಅಧಿಕಾರಿಗಳೇ ನೀವೇ ಆಗುತ್ತೀರಿ ಎಂದರು.

ಇದೇ ಸಂದರ್ಭದಲ್ಲಿ ಈ ವಿಷಯ ಕುರಿತು ನಮ್ಮೊಂದಿಗೆ ಮಾತನಾಡಿದ ಸಮಾಜ ಹೋರಾಟಗಾರರು ಜ್ಞಾನೇಶ್ವರ್ ಖಾಡೆ ಮಾತನಾಡಿ ರೈತರು ನೊಂದಿದ್ದಾರೆ ಸುಮಾರು ವರ್ಷಗಳಿಂದ ಈ ಕಾರಣಕ್ಕಾಗಿ 6/7 ವರ್ಷಗಳಿಂದ ರೈತರು ಓಡಾಡುತ್ತಿದ್ದಾರೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಅದಕ್ಕಾಗಿ ತಕ್ಷಣವೇ ಇವರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ರೈತರಾದ ರಾಜು ಝುಟಾಳೆ, ಅಪ್ಪಾಸಾಹೇಬ್ ಡೊಂಗರೆ, ಇವರು ಕೂಡ ನಮ್ಮ ವಾಹಿನಿಗೆ ಮಾತನಾಡಿ ತಕ್ಷಣವೇ ಮೇಲಾಧಿಕಾರಿಗಳು ಗಮನಹರಿಸಿ ಇಂಥ ಅಕ್ರಮಗಳನ್ನು ತಡೆಯಬೇಕು ಮತ್ತು ಸಂತನ್ ಪೆರಾರೆ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಇಲ್ಲದಿದ್ದರೆ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ ರೈತರು ದೇಶದ ಬೆನ್ನೆಲುಬು ಇವರಿಗೆ ಸೌಲತ್ತು ಸಹಾಯ ಸಹಕಾರ ಮಾಡುವುದನ್ನು ಬಿಟ್ಟು ಅನ್ಯಾಯ ಅಕ್ರಮ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪಾಂಡು ಗೋರೆ, ಸಕರಾಮ ಝುಟಾಳೆ, ಬಾಳು ಹಾಲಟ್ಟಿ, ಮತ್ತಇತಿತರ ರೈತರು ಉಪಸ್ಥಿತಿಯಲ್ಲಿದ್ದರು.

ವರದಿ:- ರಾಜು ಮುಂಡೆ .

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!