ಬೆಳಗಾವಿ : ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದರೆ ಅವರು ತಮ್ಮ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದನ್ನೆಲ್ಲವನ್ನು ಬದಿಗೊತ್ತಿರುವ ಅವರು ನಾಳೆ ಕಿತ್ತೂರು ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಅವರು ಎಂದಿನಂತೆ ತಮ್ಮ ಮೂಢನಂಬಿಕೆಗಳನ್ನು ಮೆಟ್ಟಿನಿಂತು ವಿಜಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳವರೆಗೆ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ನಡೆಯಲಿದೆ.
ಧಾರವಾಡ ಮತ್ತು ಬೆಳಗಾವಿ ಪ್ರವಾಸವನ್ನು ಸಿಎಂ ಕೈಗೊಳ್ಳಲಿದ್ದು, ಬೆಂಗಳೂರಿನ ಹೆಚ್.ಎ.ಎಲ್.ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿಂದ ರಸ್ತಯ ಮೂಲಕ ಬೆಳಗಾವಿಯ ಕೋಟೆ ಆವರಣಕ್ಕೆ ತೆರಳಲಿದ್ದಾರೆ