Ad imageAd image

ದಲಿತರ ಮೇಲಿನ ದೌರ್ಜನ್ಯ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ.!

Bharath Vaibhav
ದಲಿತರ ಮೇಲಿನ ದೌರ್ಜನ್ಯ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ.!
WhatsApp Group Join Now
Telegram Group Join Now

ಸಿಂಧನೂರು :- ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರ ಮೇಲೆ ದೌರ್ಜನ್ಯ ಪ್ರಕರಣವನ್ನು ಸಂಬಂಧಿಸಿದ 98 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ತಲಾ 5,000 ರೂ ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

2014ರಲ್ಲಿ ನಡೆದ ಮರಕುಂಬಿ ಗ್ರಾಮದಲ್ಲಿ ಸವರ್ಣಿಯರು ಮತ್ತು ದಲಿತರ ನಡುವೆ ಸಂಘರ್ಷ ನಡೆದಿತ್ತು ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಗುರುವಾರ ಅಕ್ಟೋಬರ್ 24ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಿ. ಚಂದ್ರಶೇಖರ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿತ್ತು ಗ್ರಾಮದಲ್ಲಿ ಸವರ್ಣಿಯರು ನಡೆಸುತ್ತಿದ್ದ ಅಸ್ಪೃಶ್ಯತೆಯನ್ನು ಗ್ರಾಮದ ದಲಿತರು ಖಂಡಿಸುತ್ತಿದ್ದರು ದಲಿತರ ಮೇಲೆ ದೌರ್ಜನ್ಯ ಅಸ್ಪೃಶ್ಯತೆ ವಿರೋಧಿಸಿ ಹೋರಾಟ ಮಾಡಿದ್ದ ಸಿಪಿಎಂ ಮುಖಂಡ ವೀರೇಶ್ ಮರಕುಂಬಿ ಅವರನ್ನು ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು ಇದರಿಂದ ಸವರ್ಣಿಯರು ಹಾಗೂ ದಲಿತರ ಮಧ್ಯ ಆಗಾಗ ಘರ್ಷಣೆ ನಡೆಯುತ್ತಿತ್ತು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರ ದಾಖಲಾಗಿತ್ತು.

2014ರಲ್ಲಿ ಆಗಸ್ಟ್ 28ರಂದು ಸಿನಿಮಾ ಟಿಕೆಟ್ ಮರಕುಂಬಿ ಗ್ರಾಮದ ಸವರ್ಣಿಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಗುಡಿಸಲುಗಳಿಗೆ ಬೆಂಕಿ ಹಚ್ಚಾಗಿತ್ತು ಈ ಸಂಬಂಧ ಕೊಲೆ ಯತ್ನ. ಹಲ್ಲೆ. ಜೀವ ಬೆದರಿಕೆ. ಜೊತೆಗೆ ಜಾತಿ ನಿಂದನೆ ಕಾಯ್ದೆ ಪ್ರಕರಣ ದಾಖಲಾಗಿತ್ತು ಗಲಭೆ ಪ್ರಕರಣದಲ್ಲಿ ಒಟ್ಟು 117 ಜನರನ್ನು ಬಂಧಿಸಲಾಗಿತ್ತು ಆದರೆ ಇವರ ಪೈಕಿ 16 ಜನರಲ್ಲಿ ಕೆಲವರು ನಿಧಾನವಾಗಿದ್ದರು ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡುತ್ತಿದ್ದಂತೆ ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಮುಂದೆ ಕಣ್ಣೀರು ಆಗಿದ್ದರು

 ವರದಿ:-  ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!