Ad imageAd image

ಪ್ರಿಯತಮನ ಜೊತೆ ಸೇರಿಕೊಂಡು ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಲೆಗೈದ ಪತ್ನಿ 

Bharath Vaibhav
ಪ್ರಿಯತಮನ ಜೊತೆ ಸೇರಿಕೊಂಡು ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಲೆಗೈದ ಪತ್ನಿ 
WhatsApp Group Join Now
Telegram Group Join Now

ಉಡುಪಿ : ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ ಘಟನೆ ಉಡುಪಿಯ ಅಜೆಕಾರಿನಲ್ಲಿ ನಡೆದಿದೆ.

ಕಾರ್ಕಳದ ಮರ್ಣೆ ನಿವಾಸಿ ಬಾಲಕೃಷ್ಣ (ಪತಿ) ಎಂಬುವವರನ್ನು ಪತ್ನಿ ಪ್ರತಿಮಾ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಪ್ರತಿಮಾಳ ಪ್ರಿಯಕರ ದಿಲೀಪ್ ಸಾಥ್ ನೀಡಿದ್ದಾನೆ ಎಂದು ಮೃತ ಬಾಲಕೃಷ್ಣನ ಕುಟುಂಬದವರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣನಿಗೆ ಪತ್ನಿ ಪ್ರಿಯತಮೆ ಔಷಧಿ ಕೊಡುವ ನೆಪದಲ್ಲಿ ಸ್ಲೋ ಪಾಯ್ಸನ್ ನೀಡಿ ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸದ್ಯ, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಆರೋಪಿ ಪ್ರತಿಮಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!