ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಗೆ NDA ಅಭ್ಯರ್ಥಿಯಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ 113 ಕೋಟಿ ಆಸ್ತಿ ಒಡೆಯನಾಗಿದ್ದು ನಿಖಿಲ್ ಕುಮಾರಸ್ವಾಮಿಯವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಸುವ ವೇಳೆ ಆಫೀಡಿವೇಟ್ ನಲ್ಲಿ ಅವರ ಆಸ್ತಿಯ ಕುರಿತು ಉಲ್ಲೇಖಿಸಿದ್ದಾರೆ.
ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 113 ಕೋಟಿ ಆಸ್ತಿ ಒಡೆಯನಾಗಿದ್ದು, ನಿಖಿಲ್ ಚರಾಸ್ತಿ ಮೌಲ್ಯ 78.15 ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ 29.34 ಕೋಟಿ ಇದೆ. ಇನ್ನು ನಿಖಿಲ್ ಪತ್ನಿ ರೇವತಿ ಹೆಸರಿನಲ್ಲಿ 5.49 ಕೋಟಿ ಮೌಲ್ಯದ ಚರಾಸ್ತಿ ಇದೆ. ನಿಖಿಲ್ ಪತ್ನಿ ರೇವತಿ ಹೆಸರಿನಲ್ಲಿ 43 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಇನ್ನು ನಿಖಿಲ್ ಕುಮಾರಸ್ವಾಮಿ ಮಗ ಅವ್ಯಾನದೇವ ಹೆಸರಲ್ಲಿ 11 ಲಕ್ಷ ರೂಪಾಯಿ ಇದೆ.
ನಿಖಿಲ್ ಹೆಸರಿನಲ್ಲಿ 1.488 ಕೆಜಿ ಚಿನ್ನ ಹಾಗೂ 16 ಕೆಜಿ ಬೆಳ್ಳಿ ಇದೆ. ರೇವತಿ ಹೆಸರಿನಲ್ಲಿ 1.411 ಕೆಜಿ ಚಿನ್ನ ಹಾಗೂ 33.5 ಕೆಜಿ ಬೆಳ್ಳಿ ಇದ್ದು, ನಿಖಿಲ್ ಹೆಸರಲ್ಲಿ ಒಂದು ಇನ್ನೋವಾ ಹೈಕ್ರಾಸ್, ಒಂದು ರೇಂಜ್ ರೋವರ್ ಕಾರು, ಎರಡು ಕ್ಯಾರಾವಾನ್ ಹಾಗೂ ಒಂದು ಇನೋವಾ ಕ್ರಿಸ್ಟ ಕಾರು ಇದೆ.
ಇನ್ನೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಬಿಬಿಎ ಪದವೀಧರರಾಗಿದ್ದು, ಅವರ ಹೆಸರಲ್ಲಿ ಒಟ್ಟು 70.44 ಕೋಟಿ ರೂಪಾಯಿ ಸಾಲ ಇದೆ. ರೇವತಿ ಹೆಸರಲ್ಲಿ 4.96 ಕೋಟಿ ರೂಪಾಯಿ ಸಾಲ ಇದೆ ಎಂದು ನಾಮಪತ್ರ ಸಲ್ಲಿಕೆ ವೇಳೆ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಆಫೀಡಿವೇಟ್ ನಲ್ಲಿ ಉಲ್ಲೇಖಿಸಿದ್ದಾರೆ.