Ad imageAd image

ಪಂಚ ಗ್ಯಾರಂಟಿ ಯೋಜನೆಯಿಂದ ಅನೇಕ ಬಡ ಕುಟುಂಬಗಳು ಬದುಕುತ್ತಿವೆ. ಎನ್ ವೈ ಪಿ ಚೇತನ್

Bharath Vaibhav
ಪಂಚ ಗ್ಯಾರಂಟಿ ಯೋಜನೆಯಿಂದ ಅನೇಕ ಬಡ ಕುಟುಂಬಗಳು ಬದುಕುತ್ತಿವೆ. ಎನ್ ವೈ ಪಿ ಚೇತನ್
WhatsApp Group Join Now
Telegram Group Join Now

ಮೊಳಕಾಲ್ಮೂರು :-ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚರತ್ನ ಯೋಜನೆಗಳಾದ ಗೃಹಲಕ್ಷ್ಮಿ , ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ನಿಧಿ ಈ ಯೋಜನೆಗಳನ್ನು ಗ್ರಾಮದ ಪ್ರತಿಯೊಂದು ಮನೆಗೆ ತಲುಪಿಸುವ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಎನ್ ವೈ ಪಿ ಚೇತನ್ ಸಭೆಯಲ್ಲಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಇವರು ಮಾತನಾಡಿದರು.ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಉಚಿತ ಯೋಜನೆಗಳನ್ನು ರಾಜ್ಯದ ಪ್ರತಿ ಗ್ರಾಮದ ಪ್ರತಿ ಮನೆ ಮನೆಗೆ ಯೋಜನೆಗಳನ್ನು ಮುಟ್ಟಿಸುವ ಕೆಲಸ ನಾವುಗಳು ಪ್ರಾಮಾಣಿಕವಾಗಿ ಮಾಡಬೇಕು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಯೋಜನೆಗಳನ್ನು ಪ್ರತಿಯೊಂದು ಗ್ರಾಮಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಸಮಯದಲ್ಲಿ ಅವರ ಬ್ಯಾಂಕು ಮತ್ತು ಆಧಾರ್ ಕಾರ್ಡ್ ಲಿಂಕ್ ಇರದ ಕಾರಣ ಸ್ವಲ್ಪ ಕಾಲ ವಿಳಂಬವಾಗಿದೆ ಆದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಿ ಕೊಡುತ್ತಾರೆ ಎಂದು ನಾನು ನಂಬಿರುತ್ತೇನೆ. ಈ ಸಭೆಯಲ್ಲಿ ನಾವೆಲ್ಲ ಸಮಾನ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ತಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಸರ್ಕಾರದ ಯೋಜನೆಗಳಾದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ತರಲು ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕಮಿಟಿಯವರು ಜನರ ಒಡನಾಟದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಂಡಲ್ಲಿ ಯೋಜನೆಗಳು 100% ಯಶಸ್ವಿಯಾಗಲು ಕಾರಣವಾಗುತ್ತದೆ. ಉದಾಹರಣೆಗೆ ಗೃಹಲಕ್ಷ್ಮಿ ಯೋಜನೆಯೆಲ್ಲಿ 2363 ಪಲಾನುಭವಿಗಳಿಗೆ ಪ್ರತಿ ತಿಂಗಳು 2000 ಕೊಡುವುದರಲ್ಲಿ ವಿಳಂಬವಾಗಿದೆ, ಕೆಲವೊಂದು ಮನೆಗಳಿಗೆ ಕರೆಂಟ್ ಬಿಲ್ ಪಾವತಿಸಲ್ಲಿ ಜೀರೋ ಬಿಲ್ ಆಗಿರುವುದಿಲ್ಲ ಅದಕ್ಕೆ ಸಂಬಂಧಪಟ್ಟ ಲೋಪ ದೋಷವನ್ನು ಕಂಡುಹಿಡಿದು ಸರಿಪಡಿಸಿಕೊಂಡಲ್ಲಿ ಜನರಿಂದ ಒಂದು ಒಳ್ಳೆಯ ಮಾತುಗಳನ್ನು ನಾವು ಕೇಳಬಹುದು ಹಾಗೂ ಗ್ಯಾರಂಟಿ ಯೋಜನೆ ಕಾರ್ಯಕ್ರಮವು ಯಶಸ್ವಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಯಪುರದ ಗ್ಯಾರೆಂಟಿ ಯೋಜನೆಗಳ ಸದಸ್ಯರಾದ ಜೆ ಪಿ ಸುರೇಶ ಮಾತನಾಡಿ 2363 ಅಂಕಿ ಅಂಶಗಳು ಕಡಿಮೆ ಏನು ಅಲ್ಲ ಇಂತಹ ಸಮಸ್ಯೆಗೆ ಪರಿಹಾರ ಕೊಟ್ಟಲ್ಲಿ ನಾವು ಸರ್ಕಾರವನ್ನು ಯಶಸ್ವಿಯಗೊಳಿಸಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾತ್ರ ಜನರು ನಮ್ಮನ್ನು ನಂಬಲು ಸಾಧ್ಯ, ಇಲ್ಲವಾದಲ್ಲಿ ಸಮಾಜಕ್ಕೆ ಸರ್ಕಾರದ ಬಗ್ಗೆ ಒಂದು ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಆದಕಾರಣ ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದಲ್ಲಿ ಸರ್ಕಾರವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಯೋಜನೆಗಳ ಸದಸ್ಯರುಗಳಾದ ತಮ್ಮನಹಳ್ಳಿ ಗ್ರಾಮ ಪಂಚಾಯತಿಯ ನರಸಿಂಹ ರೆಡ್ಡಿ, ಮೊಳಕಾಲ್ಮೂರು ಗ್ಯಾರಂಟಿ ಯೋಜನೆಗಳ ಸದಸ್ಯ ಮಹಮ್ಮದ್ ರಫಿ, ರಾಂಪುರ ಗ್ರಾಮದ ಹೊನ್ನೂರಪ್ಪ, ಈ ಎಸ್ ವಿಜಯ್ ಕುಮಾರ್ ಸಿದ್ದಬಸಪ್ಪ ಗೋವಿಂದಪ್ಪ, ಲೋಕೇಶ್ ಪಲ್ಲವಿ ನಾಗರಾಜ್ ಶೇಕ್, ಇಸ್ ಸ್ಮೈಲ್ ಎರಿಸ್ವಾಮಿ ಹಾಗೂ ಬೆಸ್ಕಾಂ ಇಲಾಖೆಯ ರಾಜು, ಆಹಾರ ನಿರೀಕ್ಷಿಕರಾದ ಗೀತಾಜಿನೇಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ನವೀನ್ ಕುಮಾರ್ ಹಾಗೂ ಯುವ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ತಾ ಪ ವ್ಯವಸ್ಥಾಪಕರು ನಂದೀಶ್ ಹಾಗೂ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ :-ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!