ತೆಲಂಗಾಣ : ಈಗಾಗಲೇ ಕರ್ನಾಟಕದಲ್ಲಿ ಮದ್ಯದ ಬೆಲೆ ಏರಿಸಿ ಮದ್ಯಪ್ರಿಯರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಗುರಿಯಾಗಿದೆ. ಇದರ ಮಧ್ಯ ತೆಲಂಗಾಣದಲ್ಲಿ ವಿಡಿಯೋ ಒಂದು ಬಾರಿ ವೈರಲ್ ಆಗಿದ್ದು ಮದ್ಯದ ಬಾಟಲಿಯಲ್ಲಿ ಒಂದು ಹಲ್ಲಿ ತೇಲಾಡುತ್ತಿರುವ ದೃಶ್ಯ ಸದ್ಯ ಸಕತ್ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ತಾವು ಕುಡಿಯಲು ಕುಳಿತಿದ್ದಾಗ ಹತ್ತಿರದ ಮದ್ಯದ ಅಂಗಡಿಯಲ್ಲಿ ಬಿಯರ್ ಖರೀದಿಸಿದ್ದಾರೆ. ಈ ವೇಳೆ ಅವರು ಇನ್ನೇನು ಬಾಟಲಿ ಎತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ಬಾಟಲಿಯಲ್ಲಿ ಏನೋ ಒಂದು ವಸ್ತು ತೇಲಾಡಿದಂತೆ ಕಾಣಿಸಿದೆ. ಕೂಡಲೇ ಎಚ್ಚೆತ್ತ ವ್ಯಕ್ತಿ ಏನೆಂದು ಪರಿಶೀಲನೆ ಮಾಡಿದಾಗ ಹಲ್ಲಿ ಎಂದು ಗೊತ್ತಾಗಿದೆ.ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಒಂದು ಘಟನೆ ತೆಲಂಗಾಣದ ವಿಕಾರಾಬಾದ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇನ್ನೇನು ಕುಡಿಯಬೇಕು ಅನ್ನುವಷ್ಟರಲ್ಲಿ ಬಾಟಲಿಯಲ್ಲಿ ಹಲ್ಲಿಯನ್ನು ಕಂಡು ವ್ಯಕ್ತಿ ನಿಜಕ್ಕೂ ಶಾಕ್ ಗೆ ಒಳಗಾಗಿದ್ದಾರೆ. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಾಗ ನೆಟ್ಟಿಗರು ಹಾಗೂ ಮದ್ಯಪ್ರಿಯರು ವಿಡಿಯೋ ನೋಡಿ ದಂಗಾಗಿ ಹೋಗಿದ್ದಾರೆ.