Ad imageAd image

ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್ ಕ್ಯಾಮೆರಾ ಹಾರಾಟ : ವ್ಯಕ್ತಿ ಅರೆಸ್ಟ್ 

Bharath Vaibhav
ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್ ಕ್ಯಾಮೆರಾ ಹಾರಾಟ : ವ್ಯಕ್ತಿ ಅರೆಸ್ಟ್ 
vidhana soudha
WhatsApp Group Join Now
Telegram Group Join Now

ಬೆಂಗಳೂರು: ಅನುಮತಿ ಇಲ್ಲದೆ ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೋಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಉಪ್ಪಾರಹಳ್ಳಿ ನಿವಾಸಿ ವಿನಯ್(33) ಬಂಧಿತ ಆರೋಪಿಯಾಗಿದ್ದಾನೆ. ಡ್ರೋನ್ ಮತ್ತು ರಿಮೋಟ್ ಜಪ್ತಿ ಮಾಡಲಾಗಿದೆ.

ವಿಧಾನಸೌಧ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೆಬಲ್ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಶಿವಕುಮಾರ್ ಶುಕ್ರವಾರ ಬೆಳಗ್ಗೆ 7.30ಕ್ಕೆ ಗಸ್ತುಕರ್ತವ್ಯದಲ್ಲಿದ್ದಾಗ ವಿಧಾನಸೌಧದ ಮೇಲೆ ಡ್ರೋನ್ ಹಾರಾಟ ನಡೆಸುತ್ತಿರುವುದು ಕಂಡು ಬಂದಿದೆ.

ಸುತ್ತ ಪರಿಶೀಲಿಸಿದಾದ ಹೈಕೋರ್ಟ್ ಕಡೆ ಇರುವ ಮೆಟ್ರೋ ನಿಲ್ದಾಣ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ರಿಮೋಟ್ ಕೈಯಲ್ಲಿ ಹಿಡಿದುಕೊಂಡು ಡ್ರೋನ್ ಹಾರಾಟ ನಟಿಸುತ್ತಿರುವುದು ಕಂಡು ಬಂದಿದೆ.

ಆತನನ್ನು ವಶಕ್ಕೆ ಪಡೆದು ಡ್ರೋನ್ ಮತ್ತು ರಿಮೋಟ್ ಜಪ್ತಿ ಮಾಡಲಾಗಿದೆ. ನಂತರ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಸುಭಾಷ್ ಚಂದ್ರ ವಶಕ್ಕೆ ಆತನನ್ನ ಒಪ್ಪಿಸಲಾಗಿದೆ.

ಪ್ರೀ ವೆಡ್ಡಿಂಗ್ ಶೂಟ್ ಗಾಗಿ ತುಮಕೂರಿನಿಂದ ಬೆಂಗಳೂರಿಗೆ ಬಂದು ವಿಧಾನಸೌಧ ಕಟ್ಟಡದ ವಿಡಿಯೋ ಸೆರೆ ಹಿಡಿಯುತ್ತಿರುವುದಾಗಿ ಆತ ಹೇಳಿಕೆ ನೀಡಿದ್ದಾನೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!