Ad imageAd image

ಮಹಾನಂದ ಸಜ್ಜನವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಮಹಾನಂದ ಮಹಿಳಾ ಹೋರಾಟದ ಶಕ್ತಿಯಾಗಿದ್ದರು, ನಾಟೇಕಾರ್

Bharath Vaibhav
ಮಹಾನಂದ ಸಜ್ಜನವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಮಹಾನಂದ ಮಹಿಳಾ ಹೋರಾಟದ ಶಕ್ತಿಯಾಗಿದ್ದರು, ನಾಟೇಕಾರ್
WhatsApp Group Join Now
Telegram Group Join Now

ಶಹಾಪುರ:-  ಚಿತ್ರ ಮಾಹಿತಿ. ಮಹಾನಂದ ಸಜ್ಜನವರಿಗೆ ಶಹಾಪುರ ತಾಲೂಕಿನ ಸಗರ್ ಗ್ರಾಮದಲ್ಲಿ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯು ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಅಂಗನವಾಡಿ, ಅಕ್ಷರ ದಾಸೋಹ ಸೇರಿದಂತೆ ದುಡಿಯುವರ್ಗದ ಹೋರಾಟಕ್ಕೆ ಮಹಾನಂದ ಸಜ್ಜನವರು ಶಕ್ತಿಯಾಗಿದ್ದರು. ಧರಣಿ ಪ್ರತಿಭಟನೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೂ ಮುಖಂಡರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಅಕಾಲಿಕ ಮರಣದಿಂದ ಕಾರ್ಮಿಕ ಸಂಘಟನೆಗಳ ಶಕ್ತಿ ಕುಂದಿದಂತಾಗಿದೆ ಎಂದು ಅಂಗನವಾಡಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ್ ತಿಳಿಸಿದರು.

ತಾಲೂಕಿನ ಇತ್ತೀಚೆಗೆ ಹಾವು ಕಡಿತದಿಂದ ನಿಧನರಾದ ಅಂಗನವಾಡಿ ಕಾರ್ಯಕರ್ತೆ ಮಹಾನಂದ ಸಜ್ಜನ್ ಅವರಿಗೆ ಸಗರ ಗ್ರಾಮದ ನಾಲ್ಕನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ನೌಕರರ ಸಂಘಟನೆ ತಾಲೂಕ ಸಮಿತಿ, ಸಿಐಟಿಯು ತಾಲೂಕ ಸಮಿತಿ ಹಾಗೂ ಸಗರ್ ವಲಯದ ಸಮಿತಿ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘಟನೆಯ ಶ್ರೀ ಅಭಿವೃದ್ಧಿಗಾಗಿ ಮತ್ತು, ತಾಲೂಕ ಜಿಲ್ಲಾ ರಾಜ್ಯ ಮಟ್ಟದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟಕ್ಕೆ ಶಕ್ತಿಯಾಗಿದ್ದರು. ಸಂಘಟನೆಯ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಂಗ ಬಲಪಡಿಸುವಂತಹ ಕೆಲಸ ಮಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದೈರ್ಯ ತುಂಬವಂತಹ ಕೆಲಸ ಮಾಡಬೇಕು ಎಂದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಅವರು,ಕಾರ್ಮಿಕ ಹಾಗೂ ದುಡಿಯುವ ವರ್ಗಧ ಎಲ್ಲರ ಏಳಿಗೆಗಾಗಿ ತಮ್ಮ ಜೀವನವನ್ನೇ ಧಾರೆ ಎರೆದಿದ್ದರು. ಅಂಥಹ ಶಕ್ತಿಯುಳ್ಳ ಮಹಾನಂದ ಸಜ್ಜನವರು ಭೌತಿಕವಾಗಿ ನಮ್ಮಿಂದ ದೂರ ವಿರಬಹುದು ಆದರೆ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲೆ ಇದ್ದಾರೆ. ಅವರ ತತ್ವ ಆದರ್ಶಗಳನ್ನು ತಾವೆಲ್ಲರೂ ಪಾಲಿಸಿಕೊಂಡು ಸಂಘ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಅಂಗನವಾಡಿಯ ಮೇಲ್ವಿಚಾರಕಿ ತ್ರಿವೇಣಿಯವರು ಮಾತನಾಡಿ, ಮಹಾನಂದ ಸಜ್ಜನವರು ಇಲಾಖೆ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗರ್ಭಿಣಿ ಬಾಣಂತಿ ಕಿಶೋರಿಯರು ಮತ್ತು ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕರ್ತವ್ಯದಲ್ಲಿ ಎಂದು ರಾಜ ಮಾಡಿಕೊಂಡಿರಲಿಲ್ಲ. ನಿಷ್ಠೆ ಪ್ರಮಾಣಿಕತನ ದಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಆಘಾತವಾಯಿತು ಎಂದು ಬಾಬುಕರಾಗಿ ನುಡಿದರು.

ಇದೆ ವೇಳೆ ಮಾತನಾಡಿದ ಸಿಐಟಿಯು ಸಂಘಟನೆಯ ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಅವರು,ಹೋರಾಟಗಾರರಿಗೆ ಎಂದೂ ಸಾವಿಲ್ಲ. ಮಹಾನಂದ ಅವರು ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ನೇರ, ನಿಷ್ಠುರವಾದ ವ್ಯಕ್ತಿತ್ವ ಅವರದ್ದು. ಅವರ ಹೋರಾಟದಲ್ಲಿ ಗಟ್ಟಿತನ ವಿತ್ತು.ಅವರ ಅಗಲಿಕೆ ಕಾರ್ಮಿಕ ವರ್ಗಕ್ಕೆ ಅತೀವ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮಹಾನಂದಯವರಅಗಲಿಕೆಯಿಂದ ಅವರ ಕುಟುಂಬದ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಮಹಾನಂದ ಸಜ್ಜನ್ ಅವರ ಪತಿ ಬಸವರಾಜ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗಣ್ಣ ಪೂಜಾರಿ, ದಲಿತ ಸಂಘಟನೆ ಜಿಲ್ಲಾ ಮುಖಂಡ ನಿಂಗಣ್ಣ ನಾಟೇಕಾರ್, ಅಂಗನವಾಡಿ ನೌಕರ ಸಂಘದ ವಡಗೆರಾ ತಾಲೂಕ ಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್, ಶಹಾಪುರ ತಾಲೂಕ ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಲಕ್ಷ್ಮೀ ಶಹಾಪುರ ಮಹಾದೇವಿ ಕಾಡಮಗೇರ, ರೇಣುಕಾ ಗೋಗಿ, ಸಂಪತಮ್ಮ ಚಾಮನಾಳ, ಅಕ್ಷರ ದಾಸೋಹ ಸಂಘದ ಅಧ್ಯಕ್ಷ ಸುನಂದ ಹಿರೇಮಠ್, ಈರಮ್ಮ ಚಾಮನಾಳ, ಅವ್ವಮ್ಮ, ಭಾಗಮ್ಮ ಸಗರ, ಗುರುಭಾಯಿ, ಮಲ್ಲಮ್ಮ, ಯಲ್ಲಮ್ಮ, ಮಹದೇವಿ ಮಲ್ಲಿಕಾರ್ಜುನ್ ಸಜ್ಜನ್ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವರದಿ:- ವೆಂಕಟೇಶ               

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!