ಮಾನ್ವಿ :-ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎನ್ಎಸ್ ಬೋಸರಾಜ್ ನಗರದ ಬಹು ದಿನಗಳ ಬೇಡಿಕೆ ಮತ್ತು ಜನಸಂಖ್ಯೆ ಅನುಗುಣವಾಗಿ ಸಿಟಿ ಬಸ್ ನಿಲ್ದಾಣವನ್ನು ಪ್ರತ್ಯೇಕಿಸಲಾಗಿದೆ ಎಂದು ತಿಳಿಸಿದರು ತ್ವರಿತ ಕಾಮಗಾರಿಯನ್ನು ಮಾಡಲು ,23 24 ನೇ ಸಾಲಿನ ಕೆಕೆಆರ್ಡಿಬಿ ಮೈಕ್ರೋ ಕೆ ಎಸ್ ಆರ್ ಟಿ ಸಿ ಅನುದಾನ ಮಾನವಿ ಪಟ್ಟಣದ ಬಸ್ ನಿಲ್ದಾಣವನ್ನು ಸುಮಾರು 950.00ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲಾಗುವುದೆಂದು ತಿಳಿಸಿದರು.

ಮಾನ್ವಿ ಬಸ್ ನಿಲ್ದಾಣದ ಗುತ್ತಿಗೆಯನ್ನು ಈ ಭಾಗದ ಪ್ರಸಿದ್ಧಿ ಗುತ್ತೇದಾರರಾದ ಎಂ ಈರಣ್ಣ ಅವರು ಪಡೆದುಕೊಂಡಿರುತ್ತಾರೆ ಗುಣಮಟ್ಟದ ಕಾರ್ಯವನ್ನು ಮಾಡುತ್ತೇನೆ ಎಂದು ಈ ಮೂಲಕ ತಿಳಿಸಿದರು ಮಾನ್ವಿ ಜನತೆಗೆ ಉತ್ತಮ ಮತ್ತು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಚಿವರು ಶಾಸಕರು ಪುರಸಭೆ ಸದಸ್ಯರು ಎಲ್ಲ ಸರ್ವ ಸದಸ್ಯರು ಹಾಜರಿದ್ದರು
ವರದಿ:- ಶಿವ ತೇಜ




