Ad imageAd image

ಶ್ರೀ ಮೈಲಾರಲಿಂಗೇಶ್ವರ ದೇವಾಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಕ್ಷೇತ್ರದಿಂದ ಮಂಜೂರಾದ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆ ಕಾರ್ಯಕ್ರಮ.

Bharath Vaibhav
ಶ್ರೀ ಮೈಲಾರಲಿಂಗೇಶ್ವರ ದೇವಾಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಕ್ಷೇತ್ರದಿಂದ ಮಂಜೂರಾದ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸೇಡಂ ಯೋಜನಾ ಕಚೇರಿ ವ್ಯಾಪ್ತಿಯ ಮುಧೋಳ ವಲಯದ ಮದನಾ ಕಾರ್ಯಕ್ಷೇತ್ರದಲ್ಲಿ ದಿನಾಂಕ ೨೬/೧೦/೨೦೨೪ರಂದು ದೇವಸ್ಥಾನದ ಜೀರ್ಣೋದ್ಧಾರದ ಒಂದು ಲಕ್ಷ ಮೊತ್ತದ ಡಿಡಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸೇಡಂ ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಸತೀಶ್ ಪೂಜಾರಿ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಅನೇಕ ವರ್ಷಗಳಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೂಡ ತನ್ನದೇ ಆದ ಕೊಡುಗೆ ನೀಡುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ₹100000/- ಮೊತ್ತವನ್ನು‌ ಪೂಜ್ಯರ ಆಶಿರ್ವಾದದ ರೂಪದಲ್ಲಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೇಡಂ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಮಂಜುನಾಥ್ ಎಸ್.ಜಿ ರವರು ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ ಮತ್ತು ಯೋಜನೆಯ ನಡೆದು ಬಂದ ದಾರಿಯ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಲಾಲಪ್ಪ ಪೂಜಾರಿ, ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಮೈಬೂಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ನಾಗೇಶ್ ಕಾಳ , ಮಾಜಿ ತಾಲೂಕು ಪಂಚಾಯತಿ ಸದಸ್ಯರು ಹಣಮಂತ್ ಬೋಯಿನಿ, ಖಂಡೆಪ್ಪ ಖಂಡೇಬೋಯಿನಿ, ಮಲ್ಲಪ್ಪ ಪೂಜಾರಿ, ಕೃಷಿ ಮೇಲ್ವಿಚಾರಕರು ರಾಹುಲ, ಸೇವಾಪ್ರತಿನಿಧಿ ದೇವೇಂದ್ರ, ಗ್ರಾಮೀಣ ಸೇವಾದಾರರು ಶಿರಿಷಾ, ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!