ಸಿರುಗುಪ್ಪ : -ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಅಕ್ಟೋಬರ್ 11, 2012ರಲ್ಲಿ ವಿಶ್ವಸಂಸ್ಥೆಯಿಂದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಗೆ ಮುಂದಾಗಿದ್ದು, ಮಹಿಳೆಯರಿಗೆ ಸರ್ಕಾರದಡಿಯಲ್ಲಿ ಲಭ್ಯವಿರುವ ಸೌಲಭ್ಯಗಳಾದ ಶಿಕ್ಷಣ ಹಕ್ಕು, ಸುಕನ್ಯಾ ಸಮೃದ್ದಿ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಶೇ.33 ರ ಮೀಸಲಾತಿ, ಮಹಿಳೆಯರ ರಕ್ಷಣೆಯ ಹಕ್ಕುಗಳು ಮತ್ತು ಹೆಣ್ಣು ಭ್ರೂಣ ಹತ್ಯೆ, ಇನ್ನಿತರ ದೌರ್ಜನ್ಯಗಳನ್ನು ತಡೆಗಟ್ಟುವ ಜಾಗೃತಿ ಮೂಡಿಸಲೆಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದರು.

ಸರ್ಕಾರಿ ಅಭಿಯೋಜಕರಾದ ಬಿ.ಎಲ್.ಶಾರದಾ ಅವರು ಮಾತನಾಡಿ ಬಾಲವಿವಾಹ ಪದ್ದತಿ ನಿರ್ಮೂಲನೆಯಾಗಬೇಕಿದೆ.

ವಿದ್ಯಾರ್ಥಿನಿಯರಾದ ನಿಮಗೆ ಯಾರಿಂದಾದರೂ ನಿಮಗೆ ತೊಂದರೆ ಕಿರುಕುಳ ಉಂಟಾದಲ್ಲಿ ಶಿಕ್ಷಕರಿಗೆ, ಪೋಷಕರಿಗೆ ಅಥವಾ ಪೋಲೀಸ್ ಇಲಾಖೆಗೆ ದೂರು ನೀಡುವ ಮೂಲಕ ರಕ್ಷಣೆ ಪಡೆಯಬೇಕೆಂದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್ ಅವರು ಮಾತನಾಡಿ ಕಾನೂನಿನಡಿ ಸರ್ಕಾರಿ ಶಾಲೆಗಳಲ್ಲಿ 9ನೇ ತರಗತಿ ವಿದ್ಯಾರ್ಥಿನಿಯರ ರಕ್ಷಣೆಗಾಗಿ ಕರಾಟೆ ತರಬೇತಿಯನ್ನು ನೀಡಲಾಗುತ್ತಿದೆ.ವಿದ್ಯಾಭ್ಯಾಸಕ್ಕೆ ಬೇಕಾದ ಹಲವಾರು ಸೌಲಭ್ಯಗಳಿವೆ. ಎಲ್ಲರೂ ಸದುಪಯೋಗ ಪಡೆಯಬೇಕೆಂದರು.ಸಿ.ಡಿ.ಪಿ.ಓ ಪ್ರದೀಪ್ ಅಂದಿನ ಕಾಲದಲ್ಲಿ ಸಮಾಜದಲ್ಲಿ ಹೆಣ್ಣು ಮಗುವನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿತ್ತು.
ಗಂಡು ಮಕ್ಕಳಿಗಿಂತಲೂ ಹೆಣ್ಣು ಮಕ್ಕಳೂ ಹೆಚ್ಚಿನ ಮಟ್ಟದಲ್ಲಿ ಬುದ್ದಿವಂತರಿದ್ದರೂ ಅವಕಾಶಗಳಿಂದ ವಂಚಿತರಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆಂದು ತಿಳಿಸಿದರು.
ಇದೇ ವೇಳೆ ಪ್ರಭಾರಿ ಉಪ ಪ್ರಾಂಶುಪಾಲರಾದ ಪಿ.ವೆಂಕಟೇಶ್ಶೆಟ್ಟಿ, ವಕೀಲರ ಸಂಘದ ಉಪಾಧ್ಯಕ್ಷ ಎಮ್.ಷರೀಪ್ಸಾಬ್, ಕಾರ್ಯದರ್ಶಿ ಶಿವಕುಮಾರ್.ಎಮ್, ಪ್ಯಾನಲ್ ವಕೀಲರಾದ ಮಲ್ಲಿಗೌಡ, ಟಿ.ವೆಂಕಟೇಶ ನಾಯ್ಕ್, ನೆಲಗುಂಟಯ್ಯ, ಸ್ವರೋಜ, ಬಸಮ್ಮ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




