Ad imageAd image

ಬಿಜೆಪಿ ಅಧಿಕಾರದ ಅವಧಿಯಲ್ಲಿಯೂ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖ : ವಿಜಯಪುರ ಡಿಸಿ 

Bharath Vaibhav
ಬಿಜೆಪಿ ಅಧಿಕಾರದ ಅವಧಿಯಲ್ಲಿಯೂ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖ : ವಿಜಯಪುರ ಡಿಸಿ 
WhatsApp Group Join Now
Telegram Group Join Now

ವಿಜಯಪುರ : ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ವಾದ ಪ್ರತಿವಾದಕ್ಕೂ ಕಾರಣವಾಗುತ್ತಿದೆ.

ಇದರ ಬೆನ್ನಲ್ಲೇ ಇಂದು ನಗರಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದೆ. ಸಿಂದಗಿ, ಪಡಗಾನೂರು, ಹಡಗಲಿ ಗ್ರಾಮಗಳಲ್ಲಿ ರೈತರ ಅಹವಾಲು ಆಲಿಸಿರುವ ಬಿಜೆಪಿ ತಂಡ ದಾಖಲೆ, ಮಾಹಿತಿಗಳನ್ನ ಸಂಗ್ರಹಿಸಿಕೊಂಡಿದೆ.

ಸದ್ಯ ಎಲ್ಲ ಮಾಹಿತಿ ಸಂಗ್ರಹಿಸಿಕೊಂಡಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ಡಿಸಿ ಟಿ ಭೂಬಾಲನ್ ಭೇಟಿ ಮಾಡಿದ್ದಾರೆ.

ವಕ್ಫ್​​ ಆಸ್ತಿಗಳ ಇಂದೀಕರಣ ಮೊದಲಿನಿಂದಲೂ ಮಾಡುತ್ತ ಬಂದಿದ್ದಾರೆ. ಹಿಂದಿನಂತೆಯೆ ಈಗ ನಾವು ಇಂದೀಕರಣ ಮಾಡಿದ್ದೇವೆ ಎಂದು ಬಿಜೆಪಿ ಟೀಂ ಎದುರು ಡಿಸಿ ಸ್ಪಷ್ಟನೆ ನೀಡಿದರು. 2018-19ರಲ್ಲೂ ವಕ್ಫ್ 123 ಆಸ್ತಿಗಳ ಇಂದೀಕರಣ ಆಗಿವೆ.

112 ರೈತರ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. ಪ್ರತಿವರ್ಷ ಇಂದೀಕರಣ, ನೋಟಿಸ್ ಪ್ರಕ್ರಿಯೆ ಆಗುತ್ತಿದೆ. 2020-21ರಲ್ಲಿ 138 ರೈತರಿಗೆ ನೋಟಿಸ್ ನೀಡದೇ ಇಂದೀಕರಣ ವಕ್ಫ್​​ ಹೆಸರು ಸೇರ್ಪಡೆಯಾಗಿದೆ ಎಂದು ಜಿಲ್ಲಾಧಿಕಾರಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅದೇ ರೀತಿಯಾಗಿ 2020-21ರಲ್ಲೂ ನೋಟಿಸ್ ನೀಡದೆ ಸಾಕಷ್ಟು ರೈತರ ಜಮೀನು ಪಹಣಿಯಲ್ಲಿ ವಕ್ಫ್​ ಹೆಸರು ಉಲ್ಲೇಖಿಸಿದ್ದು, ಇದು ಕಾನೂನು ಪ್ರಕ್ರಿಯೆ. ಇನ್ಮುಂದೆ ನೋಟಿಸ್ ಇಲ್ಲ, ಕಾಲಂ 11 ಹೆಸರು ಸೇರ್ಪಡೆ ಮಾಡಲ್ಲ. ಈಗ ಮಾಡಿರೋದನ್ನ ವಾಪಸ್ ಪಡೆಯುತ್ತೇವೆ, ಆದರೆ ಈ ಹಿಂದೆ ಆಗಿರುವ ಮ್ಯೂಟೇಷನ್ ಕುರಿತು ಸರ್ಕಾರದಿಂದ ಸಲಹೆ ಪಡೆದು ಮುಂದಿನ ಕಾರ್ಯ ಕೈಗೊಳ್ಳುತ್ತೇವೆ ಎಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!