ಕಲಘಟಗಿ:- ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಯೋಜನಾಧಿಕಾರಿ ಪ್ರಶಾಂತ ನಾಯ್ಕ ಹೇಳಿದರು.
ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಶ್ರೀ ಅಡವಿ ಸಿದ್ಧೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರು ನೀಡಿದ 1 ಲಕ್ಷ ರೂಪಾಯಿ ಡಿಡಿ ವಿತರಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯಧನ, ಕೆರೆಗಳ ಅಭಿವೃದ್ಧಿ, ಸಮುದಾಯ ಭವನಗಳಿಗೆ ನೆರವು, ವಾತ್ಸಲ್ಯದಡಿ ನಿರಾಶ್ರಿತರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಿಶಿಷ್ಟಚೇತರಿಗೆ ಮಾಸಾಶನ, ಸಿಎಸ್ಸಿ ಅಡಿ ಹಲವು ಆನಲೈನ್ ಸೇವೆ ಸೇರಿದಂತೆ ಅನೇಕ ಕೊಡುಗೆಗಳನ್ನು ಸಂಸ್ಥೆ ನೀಡಿದೆ. ಪ್ರತಿಯೊಬ್ಬರೂ ಯೋಜನೆಯ ಲಾಭ ಪಡೆದುಕೊಳ್ಳಿ ಎಂದರು.
ಹಿರಿಯರಾದ ತಿಪ್ಪಣ್ಣ ಅರಳಿಕಟ್ಟಿ , ಬಸಪ್ಪ ಟವಳಿ ಮಾತನಾಡಿದರು. ಟ್ರಸ್ಟ್ ಕಮೀಟಿ ಅಧ್ಯಕ್ಷ ನೀಲಕಂಠಯ್ಯ ಕಂಬಿ, ಗ್ರಾಪಂ ಸದಸ್ಯ ಮಂಜುನಾಥ ಧೂಳಿಕೊಪ್ಪ , ಮೇಲ್ವಿಚಾರಕರಾದ ನಿಶ್ಚಿತಾ ವೇದಿಕೆ ಮೇಲಿದ್ದರು.
ವರದಿ : -ಶಶಿಕುಮಾರ




