ಚೇಳೂರು :- ಪ್ರತಿ ವರ್ಷದಂತೆ ಈ ವರ್ಷವು ಪಟ್ಟಣದಲ್ಲಿ ಮಡಿವಾಳ ಸಮುದಾಯದವರು ಗಂಗಮ್ಮ ಉಬ್ಬ ಜಾತ್ರೆ ಮಹೋತ್ಸವ ಮತ್ತು ಚೌಡೇಶ್ವರಿ ದೇವಿಯ ಮೆರವಣಿಗೆಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಉಬ್ಬ ಜಾತ್ರೆ ಅಂಗವಾಗಿ ಮಡಿವಾಳ ಸಮುದಾಯದ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಗ್ರಾಮ ದೇವತೆಯಾದ ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಮೆರವಣಿಗೆ ಮಾಡಿದರು.
ಜಾತ್ರೆಯ ಮೆರವಣಿಗೆಯಲ್ಲಿ ತಮಟೆ ಮತ್ತು ಡ್ರಂ ಸೆಟ್ ಗಳು ಮೆರಗು ತಂದವು. ಪಟ್ಟಣದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಾಲಯದಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಾಗಿ ಊರಿನ ಹೊರ ವಲಯದಲ್ಲಿರುವ ಮಡಿವಾಳ ಮಾಚಿ ದೇವರ ಗುಡಿಯವರೆಗೆ ಮೆರವಣಿಗೆ ಮಾಡಿ ವಿಶೇಷ ಧಾರ್ಮಿಕ ಪೂಜೆಗಳನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಪ್ರಮುಕರು ಹಿರಿಯರು ಯುವಕರು ಹಾಗೂ ಮುಖಂಡರು ಭಾಗಿಯಾಗಿದ್ದರು.
ವರದಿ :ಯಾರಬ್. ಎಂ.




