ಚಿಕ್ಕೋಡಿ- ಜಾಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಎಲ್ಲಾ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಲಾಗುವುದು. ಚರಂಡಿ, ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡಲಾಗುವುದು” ಎಂದು ಜಾಗನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಲಕ್ಷ್ಮಣ ಮಂಗಿ ಹೇಳಿದರು.

ಜಾಗನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ 15 ತಿಂಗಳ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಜಾಗನೂರು ಗ್ರಾಮದಲ್ಲಿ ಇದುವರೆಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಇನ್ನುಳಿದ ಅವಧಿಯಲ್ಲಿ ಆಗಬೇಕಿರುವ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.
31 ಸದಸ್ಯ ಬಲ ಹೊಂದಿದ ಜಾಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುರುಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಾಳೇಶ ಪಾಂಡರೆ, ಲಕ್ಷ್ಮಣ ಮಂಗಿ, ಸಂತೋಷ ಚೌಲಗೇರ ಸ್ಪರ್ಧಿಸಿದ್ದರು, ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಹನುಮಂತಗೋಳ, ಲಕ್ಷ್ಮೀ ಕರಗಾಂವೆ ಸ್ಪರ್ಧಿಸಿದ್ದರು.
23 ಮತಗಳನ್ನು ಪಡೆದ ಲಕ್ಷ್ಮಣ ಮಂಗಿ ಅಧ್ಯಕ್ಷರಾಗಿಯೂ, 22 ಮತಗಳನ್ನು ಪಡೆದ ಲಕ್ಷ್ಮೀ ಹನುಮಂತಗೋಳ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾಳೇಶ ಪಾಂಡರೆ 2 ಮತ, ಸಂತೋಷ ಚೌಲಗೇರ 6 ಮತಗಳನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀ ಕರಗಾಂವೆ 8 ಮತಗಳನ್ನು ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಹಾಕಿದ್ದ 1 ಮತ ತಿರಸ್ಕøತಗೊಂಡಿದೆ. ಚುನಾವಣಾಧಿಕಾರಿಯಾಗಿ ಚಿಕ್ಕೋಡಿಯ ಸಹಕಾರಿ ಸಂಘಗಳ ಪ್ರಬಂಧಕರ ಮಲ್ಲಪ್ಪ ರಾವುತನವರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಪ್ಪಣ್ಣ ಇಟ್ನಾಳ ಭಾಗವಹಿಸಿದ್ದರು.
ವರದಿ ;-ರಾಜು ಮುಂಡೆ




