ಕಲಘಟಗಿ : ಇತ್ತೀಚಿಗೆ ಕಲುಷಿತ ನೀರಿನ ಸೇವನೆಯಿಂದ 70 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ವಾಂತಿ ಬೇಧಿಯಿಂದ ಆಸ್ಪತ್ರೆ ಸೇರಿದ್ದ ತಾಲೂಕಿನ ಮುತ್ತಗಿ ಗ್ರಾಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.
ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರು ಮುಖ್ಯವಾಗಿ ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ನಿಗಾವಹಿಸಿ ಮನೆ ಮನೆಗೆ ತೆರಳಿ ಪರಿಶೀಲನೆ ಮಾಡಲು ಹೇಳಿದರು. ಸಧ್ಯದ ನೀರಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಗಮನ ಹರಿಸಲು ಸಚಿವ ಲಾಡ ಹೇಳಿದರು .
ಗ್ರಾಮಸ್ಥರು ಪಿಡಿಓ ವಿರುದ್ಧ ಹರಿಹಾಯ್ದರು. ಪಿಡಿಓ ಸ್ಪಂದಿಸದಿದ್ದರೆ ಪಿಡಿಓ ವಿರುದ್ಧ ಠರಾವು ಪಾಸ್ ಮಾಡಿ ಪಂಚಾಯಿತಿ ಅವರು ಲಿಖಿತ ದೂರುಗಳನ್ನು ಕೊಡಿ ಎಂದು ಲಾಡ್ ಹೇಳಿದರು. ಗ್ರಾಮದ ವಿವಿಧ ಸಮಸ್ಯೆಗಳನ್ನು ವಿಚಾರಿಸಿದರು
ಈ ಸಂದರ್ಭದಲ್ಲಿ ಜಿಪಂ ಸಿಇಓ ಸ್ವರೂಪ ಟಿಕೆ, ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿ ಪಾಟೀಲ, ಡಾ.ಕರ್ಲವಾಡ, ಎಸ್ ಆರ್ ಪಾಟೀಲ, ಮಂಜುನಾಥಗೌಡ ಮುರಳ್ಳಿ, ಸೋಮು ಬೆನ್ನೂರ, ಗುರು ಬೆಂಗೇರಿ, ತಾಪಂ ಇಓ ಪರಶುರಾಮ ಸಾವಂತ, ಬಾಳು ಖಾನಾಪುರ, ಮುತ್ತಗಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ವರದಿ : ಶಶಿಕುಮಾರ ಕಲಘಟಗಿ