ಚಡಚಣ ಪಟ್ಟಣದ ಪ್ರವಾಸಿ ಮಂದಿರ ದಿಂದ ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್ ವರಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು
ಇಂದು ಕನ್ನಡ ರಾಜ್ಯೋತ್ಸವ ತಾಲೂಕ ದಂಡಾಧಿಕಾರಿಗಳು ಸಂಜಯ ಇಂಗಳೆ ಅವರು ಧ್ವಜಾರೋಹಣ ಮಾಡಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಈ ಸಮಯದಲ್ಲಿ ಎಲ್ಲಾ ತಾಲೂಕ ಅಧಿಕಾರಿಗಳು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿ ಕನ್ನಡ ರಾಜ್ಯೋತ್ಸವವನ್ನು ನೆರವೇರಿಸಿದರು,
ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ನೃತ್ಯ , ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಏಕೀಕೃತ ರಾಜ್ಯವಾದದ್ದು ನವೆಂಬರ್ 1, 1973 ರಂದು, ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡು 51 ವರ್ಷ ಪೂರ್ಣಗೊಂಡಿರುವ ಸುದಿನ ಈ ನವೆಂಬರ್ 01. ಈ ಬಾರಿಯೂ ನಮ್ಮ ಕನ್ನಡದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ತಮ್ಮೆಲ್ಲರಿಗೂ ವಿನಂತಿ
ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ರಾಜ್ಯ ದಿನ ಎಂದೂ ಕರೆಯುತ್ತಾರೆ, ಇದು ಭಾರತದ ಕರ್ನಾಟಕ ರಾಜ್ಯದಲ್ಲಿ ವಾರ್ಷಿಕವಾಗಿ ನವೆಂಬರ್ 1 ರಂದು ಆಚರಿಸಲಾಗುವ ಇದು 1956 ರಲ್ಲಿ ನೈಋತ್ಯ ಭಾರತದ ಕನ್ನಡ ಮಾತನಾಡುವ ಪ್ರದೇಶಗಳನ್ನು ರಾಜ್ಯಗಳ ಮರುಸಂಘಟನೆ ಕಾಯಿದೆಯಡಿಯಲ್ಲಿ ರಾಜ್ಯವನ್ನು ರೂಪಿಸಲು ವಿಲೀನಗೊಳಿಸುವುದನ್ನು ಸ್ಮರಿಸುತ್ತದೆ.
ಕರ್ನಾಟಕದ ಸಂಘದ ಸದಸ್ಯರುಗಳಾದ ಅಧ್ಯಕ್ಷರಾದ ಸೋಮು ಬಡಿಗೇರ ಮತ್ತು ಜೈ ಕರ್ನಾಟಕ ತಾಲೂಕ ಅಧ್ಯಕ್ಷರು
ರವಿ ಶಿಂದೆ ಮತ್ತು ಪತ್ರಕರ್ತರಾದ ಲಕ್ಷ್ಮಣ ಶಿಂಧೆ ಹನುಮಂತ ಕ್ಷತ್ರಿ ಮತ್ತು ಸಿದ್ದಲಿಂಗ ಬನಸೋಡೆ ಮತ್ತು ಸ್ಥಳೀಯ ಮುಖಂಡರಾದ ದೇವಪ್ಪ ಗೌಡ ಪಾಟೀಲ ಇನ್ನು ಹಲವು ಪ್ರಮುಖ ಮುಖಂಡರು ಆಚರಣೆ ಉಪಸ್ಥಿತರು