ಸಿಂಧನೂರು: ಕರ್ನಾಟಕ ರಾಜ್ಯೋತ್ಸವ- ೨0೨೪ ರ ಅಂಗವಾಗಿ ನವಂಬರ್ ೧ ರಂದು ರಾಯಚೂರು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಕನ್ನಡ ನಾಡು ನುಡಿ ಸಮಾಜ ಪರ ಅನಾಥರ ಪರ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮಾಣಿಕ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ, ಸಿಂಧನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂಧ್ಯ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ರವರನ್ನು ಆಶ್ರಮ ಕ್ಷೇತ್ರದಿಂದ ಅತ್ತುನ್ನತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.
ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರವರಾದ – ಮಾಂತೇಶ್ ಮಸ್ಕಿ, ಸಾಹಿತ್ಯ ಕ್ಷೇತ್ರದಿಂದ, ಜಿ. ವೀರಾರೆಡ್ಡಿ ಪತ್ರಿಕೋದ್ಯಮ ಕ್ಷೇತ್ರದಿಂದ, ಡಾ. ಶೈಲೇಶ್ ವೈದ್ಯಕೀಯ ಕ್ಷೇತ್ರದಿಂದ, ಕರ್ನಾಟಕ ಸಂಘ ರಾಯಚೂರು ಸಂಸ್ಥೆ ಕ್ಷೇತ್ರದಿಂದ, ಶರಣಬಸವ ಮಸ್ಕಿ. ಯಾಕ್ಲಾಸಪೂರ ಕೃಷಿ ಕ್ಷೇತ್ರದಿಂದ, ಇವರನ್ನು ಗುರುತಿಸಿ,, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ರಾಯಚೂರು ಶಾಸಕರಾದ ಡಾ. ಶಿವರಾಜ್ ಪಾಟೀಲ್ ರಾಯಚೂರು ಗ್ರಾಮೀಣ ಶಾಸಕರಾದ. ಬಸನಗೌಡ ದದ್ದಲ್, ಹಾಗೂ ಜಿಲ್ಲಾಧಿಕಾರಿ. ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಪುಟ್ಟ ಮಾದಯ್ಯ , ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಸಂಘ ಸಂಸ್ಥೆಯ ಮುಖಂಡರು ಸಮ್ಮುಖದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಬಸವರಾಜ ಬುಕ್ಕನಹಟ್ಟಿ