ತಳಕು-ನಾಯಕನಹಟ್ಟಿ ಭಾಗದ ನಾಲ್ಕು ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ ಎನ್ ವೈ ಗೋಪಾಲ್ ಕೃಷ್ಣ.
ನಾಯಕನಹಟ್ಟಿ:: ಕಳೆದ 15 ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದಾಗಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗಿದ್ದು ಸಮೃದ್ಧಿಯಾದ ನೀರು ಹರಿದಿದೆ.
ಈ ಹಿನ್ನೆಲೆಯಲ್ಲಿ ನವಂಬರ್ 3 ಭಾನುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲ ಕೃಷ್ಣ ಅವರು ಕ್ಷೇತ್ರದ ತಳಕು ಮತ್ತು ನಾಯಕನಹಟ್ಟಿ ಹೋಬಳಿ ಭಾಗದ ಕೆರೆಗಳಿಗೆ ಬಾಗಿನ ಅರ್ಪಿಸಿದ್ದಾರೆ.
ಮೊನ್ನೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಕೆರೆ, ರಾಮಸಾಗರ ಕೆರೆ, ರೇಖಲಗೆರೆ ಕೆರೆ, ಗುಂತಕೋಲಮ್ಮನಹಳ್ಳಿ ಕೆರೆ, ಒಟ್ಟು ನಾಲ್ಕು ಕೆರೆಗಳಿಗೆ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕವಾಗಿ ಬಾಗಿಲವನ್ನು ಅರ್ಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ರೇಖಲಗೆರೆ ಕೆರೆ ಫೀಡರ್ ಚಾನೆಲ್ ಮೂಲಕ ಕಾಮಗಾರಿಯನ್ನು ₹5. ಕೋಟಿ ವೆಚ್ಚದಲ್ಲಿ ಕೈಕೊಳ್ಳಲಾಗಿದೆ ಇದರಿಂದ ಚಿನ್ನನಗರಿ ನದಿಯ ಮೂಲಕವಾಗಿ ಈ ಒಂದು ರೇಖಲಗೆರೆ ಫೀಡರ್ ಚಾನೆಲ್ ನೀರು ಹರಿದಿದ್ದು ತಳಕು ಮತ್ತು ನಾಯಕನಹಟ್ಟಿ ಭಾಗದ ಕೆರೆಗಳಿಗೆ ನೀರು ಹರಿದು ಬಂದಾಗಿದೆ. ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ನೇರಲಗುಂಟೆ ಸೂರನಾಯಕ, ಬಾಲರಾಜ್, ಬಂಡೆ ಕಪಿಲೆ ಓಬಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರ ನಾಯಕ, ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್. ರವಿಕುಮಾರ್, ವಕೀಲ ಉಮಾಪತಿ, ಜಿ.ಕೆ.ಹಳ್ಳಿ ವಕೀಲ ಮಲ್ಲೇಶ್, ಟಿ ಬಸಪ್ಪ ನಾಯಕ, ವರವು ಕಾಟಯ್ಯ, ಶಂಕರ್ ಮೂರ್ತಿ, ಮೀಸೆ ಓಬಯ್ಯ, ರೇಖಲಗೆರೆ ಎ.ಟಿ. ಅಶೋಕ್,. ಮಲ್ಲೂರಹಳ್ಳಿ ಕೆ.ಟಿ. ನಾಗರಾಜ್,
ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅನಿತಾ ರವಿಕುಮಾರ್, ಉಪಾಧ್ಯಕ್ಷ ಎಂ. ತಿಪ್ಪೇಸ್ವಾಮಿ, ಸದಸ್ಯರಾದ ಪಾಲಮ್ಮ ಜಿ ಬೋರಯ್ಯ, ಪ್ರೇಮಲತಾ ಶಂಕರ್ ಮೂರ್ತಿ, ಬಸಕ್ಕ ತಿಪ್ಪೇಸ್ವಾಮಿ, ಗೀತಮ್ಮ ಸಿ ಕುಮಾರ್, ಲಕ್ಷ್ಮಿ ಮಹಾದೇವಣ್ಣ, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ದಳವಾಯಿ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಬಿ ಕಾಟಯ್ಯ, ವೀರೇಶ್, ಬಸಮ್ಮ, ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷ ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಪಟೇಲ್ ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜುಳಾ ದುರುಗೇಶ್,ಹಾಗೂ
ನಾಯಕನಹಟ್ಟಿ ಓಬಳೇಶ್, ಬ್ಯಾಂಕ್ ಓಬನಾಯಕ, ಗುಂತಕೋಲಮ್ಮನಹಳ್ಳಿ ಕೆ. ಟಿ. ಮಲ್ಲಿಕಾರ್ಜುನ್, ಕೊರಡಿಹಳ್ಳಿ ಸುರೇಂದ್ರಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ರಮೇಶ್, ಗುತ್ತಿಗೆದಾರ ಪರಶುರಾಮ್, ಪಿಎಸ್ಐ ಕೆ ಶಿವಕುಮಾರ್ ಹಾಗೂ ಸಿಬ್ಬಂದಿ, ಮತ್ತು ಹೋಬಳಿಯ ವಿವಿಧ ಹಳ್ಳಿಗಳ ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಪಿಎಂ ಗಂಗಾಧರ