ಚಾಮರಾಜನಗರ:- ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗೊಮ್ಮಟಾಪುರಂ ನಲ್ಲಿ ಭಾನುವಾರ ಗೊರೆಹಬ್ಬ ಆಚರಿಸಲಾಯಿತು.ಗೊಮ್ಮಟಾಪುರಂ ಗ್ರಾಮಸ್ಥರು ದೀಪಾವಳಿಯ ಮರುದಿನ ಗೊರೆಹಬ್ಬ ಆಚರಣೆ ಮಾಡುವರು.
ಗ್ರಾಮದಲ್ಲಿ ಎಲ್ಲಾ ಕೋಮಿನವರು ಒಗ್ಗಟ್ಟಾಗಿ ಆಚರಿಸುವ ಗೊರೆಹಬ್ಬ ಗ್ರಾಮೀಣ ಸೊಗಡನ್ನು ಕಾಣಬಹುದು.ಗ್ರಾಮದಲ್ಲಿ ಸಗಣಿ ಸಂಗ್ರಹಿಸಿ, ಶ್ರೀ ಭೀರೇಶ್ವರ ದೇವಾಲಯ ಹಿಂಭಾಗ ರಾಶಿ ಹಾಕಿದ ಬಳಿಕ , ಗ್ರಾಮದ ಹೊರ ವಲಯದಿಂದ ಚಾಟಿಕೋರನೊಬ್ಬ( ವೇಷಧಾರಿ) ಕತ್ತೆಯ ಮೇಲೆ ಕುಳ್ಳರಿಸಿಕೊಂಡು ದಾರಿಯುದ್ದಕ್ಕೂ ಅವ್ಯಾಚ್ಯ ಶಬ್ದಗಳಿಂದನಿಂದಿಸುವುದು ವಾಡಿಕೆ.
ಮಕ್ಕಳು ಹಿರಿಯರು, ಮಹಿಳೆಯರು ಎನ್ನದೆ ಅವ್ಯಾಚ್ಯ ಶಬ್ದಗಳಿಂದ ನಿಂಧಿಸುವ ಗ್ರಾಮಸ್ಥರು, ಭೀರೇಶ್ವರ ದೇವಾಲಯ ಹಿಂಭಾಗ ಇರುವ ಸರಣಿ ರಾಶಿಯ ಮೇಲೆ ಉರುಳಾಡಿ, ಸಗಣಿ ಉಂಡೆಗಳನ್ನು ಪರಸ್ಪರ ಹೊಡೆದಾಡಿಕೊಂಡರು. ಈ ರೀತಿ ಮಾಡಿದರೆ ಚರ್ಮ ಖಾಯಿಲೆ ಬರುವುದಿಲ್ಲೆನ್ನುವ ನಂಬಿಕೆ ಗ್ರಾಮಸ್ಥರದ್ದಾಗಿದೆ.ನಂತರ ಗ್ರಾಮದ ಹೊರವಲಯದಲ್ಲಿರುವ ಕೊಂಡಕಾರನ ಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿ ದಹಿಸಿದರು.
ವರದಿ :ಸ್ವಾಮಿ ಬಳೇಪೇಟೆ