ಮಾನ್ವಿ:-ಪಟ್ಟಣದ ಎಪಿಎಂಸಿ ಪ್ರಹಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ,ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿಗೆ ಎಪಿಎಂಸಿ ಹಮಾಲರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮವು ಜರುಗಿಸಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರವಾಧ್ಯಕ್ಷರಾದ ಎಂಬಿ ಸಿದ್ದರಾಮಯ್ಯ ಸ್ವಾಮಿ ಅವರು ನಮ್ಮ ಭಾಗದ ಕಾರ್ಮಿಕರು ಬಹಳ ಹಿಂದುಳಿದಿದ್ದಾರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಮ್ಮ ಹೋರಾಟವು ಅವರ ಪರವಾಗಿರುತ್ತದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ನೂತನವಾಗಿ ಆಯ್ಕೆಯಾದ ಸಂಘಟನಾ ಕಾರ್ಯದರ್ಶಿ ಹನುಮಂತ ನಾಯಕ್ ಮಾತನಾಡಿ ಕಾಂಗ್ರೆಸ್ ಪಕ್ಷದ ವತಿಯಿಂದ ನಮ್ಮನ್ನು ಕಾರ್ಮಿಕ ವಿಭಾಗಕ್ಕೆ ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದಗಳು.ಕಾರ್ಯಕ್ರಮದಲ್ಲಿ ಅಮಾಲರ ಸಂಘದ ಅಧ್ಯಕ್ಷ ಹನುಮಂತ. ಹಂಪಯ್ಯ ನಾಯಕ್. ಭಾಷಾ. ಇನ್ನು ಅನೇಕರು ಭಾಗಿಯಾಗಿದ್ದರು
ವರದಿ :-ಶಿವತೇಜ




