ಮಾನ್ವಿ: -ಪಟ್ಟಣದ ವಿಜಯನಗರದಲ್ಲಿನ ಯೋಗಸನ್ನಿಧಿ ಜ್ಞಾನ ವಿದ್ಯಾ ಪೀಠ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ಯೋಗಸನ್ನಿಧಿ ಜ್ಞಾನ ವಿದ್ಯಾ ಪೀಠ ಟ್ರಸ್ಟ್ನ 7 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು
ತಾ.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ .ಡಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಶಿಕ್ಷಣವನ್ನು ಪಡೆಯುವುದು ಜ್ಞಾನವನ್ನು ಹೆಚ್ಚಿಸಿಕೊಳ್ಳುವುಹದಕ್ಕೆ ವಿನಃ ಅಂಕಗಳನ್ನು ಪಡೆಯುವುದಕ್ಕಾಗಿ ಅಲ್ಲ ಕಡಿಮೆ ಅಂಕಗಳನ್ನು ಪಡೆದವರು ಕೂಡ ಉತ್ತಮ ಸಾಧನೆಯನ್ನು ತೋರಿದ್ದಾರೆ.
ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನದಲ್ಲಿರುವುದನ್ನು ಕಾಣಬಹುದು ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಮುಂಬರುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಶಿಕ್ಷಣ ಇಲಾಖೆ 20 ಅಂಶಗಳ ಕಾರ್ಯಕ್ರಮವನ್ನು ಹಾಕಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ತಾಲೂಕಿನ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೋರತೆಯ ನಡುವೆಯು ಅತಿಥಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಾಲಾ ಅವಧಿಯ ನಂತರ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ

ಶಿಕ್ಷಣ ಇಲಾಖೆಯ ಜೋತೆಗೆ ಸಂಘ ಸಂಸ್ಥೆಗಳು ನಾಡಿನ ವಿಷಯ ಪರಿಣಿತರಿಂದ ಉಪನ್ಯಾಸ ಕಾರ್ಯಕ್ರಮಮವನ್ನು ಅಯೋಜಿಸಿದಲ್ಲಿ ಮಕ್ಕಳಿಗೆ ಪರೀಕ್ಷೆಗಳನ್ನು ಬರೆಯುವುದಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಚಾಮರಾಜ ನಗರದ ಸ.ಪ.ಪೂ.ಕಾಲೇಜಿನ ರಸಾಯನಶಾಸ್ತ ಪ್ರಾಧ್ಯಾಪಕರಾದ ನಾಗಾಲಂಬಿಕೆ ,ಎಂ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ .ವಾರ್ಷಿಕ ಪರೀಕ್ಷೆಗಳ ನಂತರ ಪಿ.ಯು.ಸಿ ಶಿಕ್ಷಣವು ಮುಂದಿನ ವ್ಯಾಸಂಗಕ್ಕೆ ಪ್ರಾಮುಖವಾಗಿರುವುದರಿಂದ ಮುಂದಿನ ಶಿಕ್ಷಣದ ಕುರಿತು ಚಿಂತನೆ ನಡೆಸಿ ವೈದ್ಯಕೀಯ ಕ್ಷೇತ್ರವನ್ನು ಅಯ್ಕೆ ಮಾಡಿಕೊಳ್ಳುವವರು ವಿಜ್ಞಾನ ವಿಷಯವನ್ನು ಅಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು.
ಬ್ಯಾಂಕಿಗ್ ಹಾಗೂ ಲೆಕ್ಕಾಪರಿಶೋಧಕರಾಗುವವರು ವಾಣಿಜ್ಯ ವಿಭಾಗವನ್ನು ಅಯ್ಕೆ ಮಾಡಿಕೊಳ್ಳಿ,ಸರಕಾರಿ ಆಡಳಿತ ವಿಭಾಗದಲ್ಲಿ ಸೇವೆ ಸಲ್ಲಿಸ ಬಯಸುವವರು ಕಲಾ ವಿಭಾಗವನ್ನು ಅಯ್ಕೆ ಮಾಡಿಕೊಂಡಲ್ಲಿ ನಿಮ್ಮ ಅಭ್ಯಾಸ ಚೆನ್ನಾಗಿ ನಡೆಯುವುದಕ್ಕೆ ಸಾಧ್ಯವಾಗುತ್ತದೆ. ಪಠ್ಯದಲ್ಲಿ ವಿಷಯಗಳನ್ನು ಅಭ್ಯಾಸಮಾಡಿ ಅನುಮಾನಗಳಿದಲ್ಲಿ ಉಪನ್ಯಾಸಕರಲ್ಲಿ ಪರಿಹಾರಿಸಿಕೊಂಡಲ್ಲಿ ಮಾತ್ರ ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಎಸ್.-ವ್ಯಾಸ ಮಾನಿತ ವಿಶ್ವವಿದ್ಯಾಲಯದ ಶ್ರೀ. ಕರಿಬಸಪ್ಪ ಜೀ, ಲಿಂಗಸೂಗುರು ಸ್ವಾಮಿ ವಿವೇಕಾನಂದ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಶೇಖರ ಹೆಚ್.. ಶರಣಯ್ಯ ಹಿರೇಮಠ ಮಾನ್ವಿ ಇವರು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು ಗಣ್ಯರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಮುಖಂಡರಾದ ಶಿವರಾಜ್ ನಾಯಕ, ರಾಜಾ ಸುಭಾಷನಾಯಕ, ಟಿ.ಎ.ಪಿ.ಸಿ.ಎಂ.ಸಿ ಅಧ್ಯಕ್ಷರಾದ ತಿಮ್ಮರೆಡ್ಡಿ ಭೋಗವತಿ, ಎ.ಎನ್,ರಾಜು, ಸಿ.ಆರ್.ಪಿ. ಹಾಲೇಶ್, ಎಂ.ನಾಗರಾಜ, ಪ್ರೇಮಕುಮಾರ, ವಿಶ್ವನಾಥ ಗೋರ್ಕಲ್, ಯೋಗಸನ್ನಿಧಿ ಜ್ಞಾನ ವಿದ್ಯಾ ಪೀಠ ಟ್ರಸ್ಟ್ನ ಅಧ್ಯಕ್ಷರಾದ ರುದ್ರಮುನಿ ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಯೋಗಗುರು ಅನ್ನದಾನಯ್ಯಸ್ವಾಮಿ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ,ಶಿಕ್ಷಕರು ಭಾಗವಹಿಸಿದರು.
ಮಾನ್ವಿ: ಪಟ್ಟಣದ ಯೋಗಸನ್ನಿಧಿ ಜ್ಞಾನ ವಿದ್ಯಾ ಪೀಠ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ನಡೆದ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾ.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ .ಡಿ ಉದ್ಘಾಟಿಸಿ ಮಾತನಾಡಿದರು.
ವರದಿ:- ಶಿವ ತೇಜ




