ಮುದಗಲ್ಲ :- ಇತ್ತೀಚೆಗೆ ಮುದಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ.ಸಾ.ಪ. ದ ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಲಿಂಗಸೂಗೂರು ಶಾಸಕರಿಗೆ ಭೇಟಿಯಾಗಿ ರಾಜ್ಯೋತ್ಸವ ಹಾಗು ಕೋಟೆ ಉತ್ಸವ ಮಾಡಲು ನವೆಂಬರ 29 ಹಾಗು 30 ರಂದು ದಿನಾಂಕ ನಿಗದಿ ಮಾಡಿದ್ದು ತಾವು ಸಂಬಂಧ ಪಟ್ಟ ಸಚಿವರಿಗೆ ಅಹ್ವಾನ ಮಾಡ ಬೇಕೆಂದು ಹೇಳಿದಾಗ ಶಾಸಕರು ಸಚಿವರ ಜೊತೆ ದೂರವಾಣಿ ಕರೆ ಮಾಡಿ ಮಾತಾಡಿರುವ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಳೆದ 16 ವರ್ಷಗಳಿಂದ ಮುದಗಲ್ ಕೋಟೆ ಉತ್ಸವ, ತಾಲೂಕು ಕೇಂದ್ರ ಘೋಷಣೆ ಮಾಡಬೇಕು ಎಂದು ಸತತ ಪ್ರವಾಸೋದ್ಯಮ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಹಲವಾರು ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಹೋರಾಟ ಮಾಡುತ್ತಾ ಬಂದಿದೆ.
ನಾಲ್ಕು ವರ್ಷದ ಹಿಂದೆ ನಮ್ಮ ಜಿಲ್ಲಾಧ್ಯಕ್ಷರು ಎಲ್ಲಾ ತಾಲೂಕು ಅಧ್ಯಕ್ಷರ ಸಭೆ ಕರೆದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುದಗಲ್ ಕೋಟೆ ಉತ್ಸವ ಮಾಡಲು ಸಿದ್ದತೆ ಮಾಡಿ ಕೊಂಡಿದ್ದರು ಅದಕ್ಕೆ ನಾವು ಈ ರೀತಿ ಮಾಡುವುದು ಸೂಕ್ತ ಅಲ್ಲ ಮುದಗಲ್ ಪಟ್ಟಣದ ಹಿರಿಯರ ಸಮಿತಿ ರಚನೆ ಮಾಡಿ ಅದರ ನೇತೃತ್ವದಲ್ಲಿ ಕೋಟೆ ಉತ್ಸವ ಮಾಡುವುದು ಸೂಕ್ತ ಎಂದು ಸಲಹೆ ಕೊಟ್ಟಿದಿದೆ ಏಕೆಂದರೆ ಮುದಗಲ್ ಪಟ್ಟಣದ ಎಲ್ಲಾ ವರ್ಗದ ಜನರು ಕೋಟೆ ಉತ್ಸವ ಹಬ್ಬವಾಗಿ ಆಚರಿಸುವ ಕನಸಾಗಿದೆ.
ಆದರೆ ಕೋಟೆ ಉತ್ಸವ ಮಾಡ ಬೇಕೆಂದರೆ ಪಟ್ಟಣದ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ , ಜಾತ್ಯತೀತವಾಗಿ ಪಟ್ಟಣದ ಹಿರಿಯರ ನೇತೃತ್ವದಲ್ಲಿ ಕೋಟೆ ಉತ್ಸವ ಸಮಿತಿ ರಚಿಸಿ ಅದರ ನೇತೃತ್ವದಲ್ಲಿ ಕೋಟೆ ಉತ್ಸವ ಮಾಡಬೇಕು, ಇದೆಲ್ಲ ಶಾಸಕರ ಗಮನಕ್ಕೆ ಇದ್ದರೂ ಅವರಾದರೂ ಇವರಿಗೆ ಬುದ್ದಿವಾದ ಹೇಳ ಬೇಕಿತ್ತು ಅವರು ಮೌನ ಸಮ್ಮತಿ ಸೂಚಿಸಿದ್ದು ಸೂಕ್ತ ಅಲ್ಲ ಕ.ಸಾ.ಪ. ದ ತಾಲೂಕು ಅಧ್ಯಕ್ಷರು ತಮ್ಮ ಹೆಸರು ಆಗ ಬೇಕು.
ಎಂದು ಕೋಟೆಯ ಬಗ್ಗೆ ಕಾಳಜಿ ವಹಿಸಿ ಕೋಟೆ ಸ್ವಚ್ಛತೆೆಗೆ ಮುಂದಾಗಿದ್ದವರಿಗೆ, ಕೋಟೆಯ ಚಿಂತಕರಿಗೆ, ಕೋಟೆ ಉತ್ಸವದ ಸಲುವಾಗಿ ಹೋರಾಟ ಮಾಡಿದವರಿಗೆ ತಿಳಿಸದೆ ಕೋಟೆ ಅಂದರೆ ತಮ್ಮ ಪಿತ್ರಾರ್ಜಿತ ಆಸ್ಥಿ ಎಂದು ತಿಳಿದು ಕೊಂಡು ಈ ರೀತಿ ವರ್ತಿಸುತ್ತಿದ್ದು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಇದೆ ರೀತಿ ಮುಂದುವರೆದರೆ ನಮ್ಮ ಸಂಘಟನೆಯಿಂದ ಕ.ಸಾ.ಪ ತಾಲೂಕು ಅಧ್ಯಕ್ಷರು ಸೇವೆ ಸಲ್ಲಿಸುತ್ತಿರುವ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಪತ್ರಿಕೆ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು..
ವರದಿ:- ಮಂಜುನಾಥ ಕುಂಬಾರ