ಬೆಂಗಳೂರು: -ಚನ್ನಪಟ್ಟಣ ಉಪ ಚುನಾವಣೆ ಭರಾಟೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಿ ಮತ್ತು ಅವರ ಮುಖಂಡ ಜೊತೆಗೆ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಅವರ ಪರ ಪ್ರಚಾರದ ವೇಳಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಗೀತಾ ಶಿವರಾಮ್ ೨೦೨೩ರಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಲ ಆಕಾಂಕ್ಷಿ ಅಭ್ಯರ್ಥಿಯಾಗಿದರು.

ಅವರಿಗೆ ಟಿಕೆಟ್ ಕೈ ತಪ್ಪಿತ್ತು ಆ ಒಂದು ಅಸಮಾಧಾನದಿಂದ ಗೀತಾ ಶಿವರಾಮ್ ಮತ್ತು ಅವರ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ನಮ್ಮ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸೇರ್ಪಡೆ ಆಗಿದ್ದಾರೆ.ನಮ್ಮ ಪಕ್ಷಕ್ಕೆ ಬಂದಿದಕ್ಕಾಗಿ ನಾನು ಅಧ್ಯಕ್ಷನಾಗಿ ಇರುವುದರಿಂದ ಅವರನ್ನು ಸ್ವಾಗತಿಸುವುದು ನನ್ನ ಜವಾಬ್ದಾರಿ ಅವರಿಗೆ ಭೇಟಿ ಮಾಡಿ ಶುಭ ಕೋರಿ ಮಾತಾಡಿದರು.

ಗೀತಾ ಶಿವರಾಮ್ ಮಾತನಾಡಿ ನಾನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಜನತೆಗೆ ಹಲವಾರು ರೂಪಗಳಲ್ಲಿ ಸಹಾಯ ಸಹಕಾರದೊಂದಿಗೆ ಕೆಲಸ ಮಾಡಿದ್ದೇನೆ ಕೊನೆಗಳಿಗೆಯಲ್ಲಿ ೨೦೨೩ರ ಚುನಾವಣೆಯಲ್ಲಿ ಟಿಕೆಟ್ ಕೊಡುವಲ್ಲಿ ಡಿ ಕೆ ಶಿವಕುಮಾರ್ ಮೊಸ ಮಾಡಿದರು ಅದಕ್ಕೆ ನನ್ನ ಮಾತೃ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿಗಳು ಹಾಲಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ನನ್ನ ಮನೆಗೆ ಬಂದು ಜೆಡಿಎಸ್ ಗೆ ಬಂದು ಬಿಡಿ ನಾವು ನಮ್ಮ ಪಕ್ಷದಲ್ಲಿ ಮನೆ ಮಗಳಂತೆ ನೋಡಿ ಕೊಳ್ಳುತ್ತೇವೆ ಎಂದರು ನಾನು ಜೆಡಿಎಸ್ ಪಕ್ಷದಿಂದ ಕೌನ್ಸಲರ್ ಆಗಿದ್ದೆ ಮತ್ತು ನನ್ನ ತಂದೆ ಜವಾಹರಲಾಲ್ ಅವರು ೨ಸಲಾ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆಲಸ ಮಾಡಿದ್ದಾರೆ ನನ್ನ ಮನೆತನ ಜೆಡಿಎಸ್ ಹೇಳಿದರು ಅದಕ್ಕೆ ಮರಳಿ ನನ್ನ ಗೂಡಿಗೆ ಬಂದಿದ್ದೇನೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಮುನಿಸ್ವಾಮಿ ಅಣ್ಣಾನವರು ದಾಸರಹಳ್ಳಿಗೆ ಬನ್ನಿ ಎಂದರು ನನ್ನ ಅಭಿಮಾನಿಗಳು ನನ್ನ ಸಮುದಾಯದ ಇದ್ದೆ ರಾಜಕೀಯವಾಗಿ ಅಲ್ಲಾ ಸೌಜನ್ಯಕ್ಕಾಗಿ ಬರುತ್ತೇನೆ ಎಂದು ಅಧ್ಯಕ್ಷರಿಗೆ ಹೇಳಿದ್ದೇನೆ ಅಧ್ಯಕ್ಷರು ನಮ್ಮ ಮನೆಗೆ ಬಂದಿದ್ದು ನಮ್ಮೇಲ್ಲರಿಗೂ ಸಂತೋಷ ಆಗಿದೆ ಎಂದು ಗೀತಾ ಶಿವರಾಮ್ ಮಾತನಾಡಿದರು.ಈ ಸಂದರ್ಭದಲ್ಲಿ ಚೊಕ್ಕಸಂದ್ರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಗೋವಿಂದಪ್ಪ, ಕದರೇಶ್ ಸೇರಿದಂತೆ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್




