ಚಿಕ್ಕೋಡಿ: -ಅಭಿವೃದ್ಧಿ ವಿಷಯದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲಾ,ಚಿಕ್ಕೋಡಿ ಪಟ್ಟಣದ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದು ಕರ್ನಾಟಕ ಸರ್ಕಾರ ದೆಹಲಿಯ ವಿಶೇಷ ಪ್ರತಿನಿಧಿ,ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು.
ಅವರು ಚಿಕ್ಕೋಡಿ ಪಟ್ಟಣದಲ್ಲಿ ಪುರಸಭೆಯ ಎದುರು ಹಳ್ಳದಲ್ಲಿ ಮೇಲೆ ವಿಶೇಷ ಅನುದಾನದಲ್ಲಿ 63 ಲಕ್ಷ ರೂಪಾಯಿ ವೆಚ್ಚದಲ್ಲಿ 13 ವ್ಯಾಪಾರಿ ಮಳಿಗೆಗಳ ಉದ್ಘಾಟನೆ ನೇರೆವರಿಸಿ ಮಾತನಾಡಿದರು.ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವನ್ನಾಗಿಸಿಕೊಂಡು ಕೆಲಸವನ್ನು ಮಾಡಿಕೊಂಡು ಬಂದಿರುತ್ತೇವೆ.ಚಿಕ್ಕೋಡಿ ಪಟ್ಟಣದ ಅಭಿವೃಧಿಯೇ ನಮ್ಮ ಧ್ಯೆಯ.ಪಟ್ಟಣದ ಬನಶಂಕರಿ ದೇವಸ್ಥಾನದಿಂದ ನಿಪ್ಪಾಣಿ ಮುಧೋಳ ರಸ್ತೆವರೆಗೆ ಹಳ್ಳದಲ್ಲಿ ಮೇಳೆ ಸ್ಲ್ಯಾಪ್ ಹಾಕುವ ಕಾಮಗಾರಿಗೆ ಶ್ರಿಘ್ರವೇ ಚಾಲನೆ ನೀಡಲಾಗುವು.ಗುರುವಾರ ಪೇಟ ರಸ್ತೆಯ ಅಗಲೀಕರಣ ಕಾಮಗಾರಿಗೆ ಅನುದಾನ ಮಂಜೂರು ಆಗಿದೆ.ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬಳಿಕ ಪುರಸಭೆ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠಯವರು ಮಾತನಾಡಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಚಿಕ್ಕೋಡಿ ಪಟ್ಟಣಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಎಸಿ ಸುಭಾಷ ಸಂಪಗಾವಿ,ತಹಶಿಲ್ದಾರರ ಚಿದಬರಂ ಕುಲಕರ್ಣಿ,ಪುರಸಭೆ ಉಪಾಧ್ಯಕ್ಷ ಈರಫಾನ ಬೇಪಾರಿ,ಸಂಜಯ ಕವಟಗಿಮಠ, ರಾಮಾ ಮಾನೆ,,ಅನೀಲ ಮಾನೆ,ಸಾಬೀರ ಜಮಾದಾರ,ಗುಲಾಬಹುಸೇನ ಬಾಗವಾನ,ಸಿದ್ದಪ್ಪ ಡಂಗೇರ,ವಿಶ್ವನಾಥ ಕಾಮಗೌಡ,ನಾಗರಾಜ ಮೇದಾರ,ಪ್ರವೀಣ ಕಾಂಬಳೆ,ಬಾಬು ಮಿರ್ಜೆ,ಅದಮ ಗಣೇಶವಾಡಿ,ಅಜಯ ಕವಟಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.
ವರದಿ:- ರಾಜು ಮುಂಡೆ