Ad imageAd image

ಗುಡ್ ನ್ಯೂಸ್ ಕಾಲೇಜಿನಲ್ಲಿ ರಾಷ್ಟ್ರೀಯ ಅಯೋಡಿನ್ ನ್ಯೂನತೆಯ ನಿಯಂತ್ರಣ ಅರಿವು ಕಾರ್ಯಕ್ರಮ

Bharath Vaibhav
ಗುಡ್ ನ್ಯೂಸ್ ಕಾಲೇಜಿನಲ್ಲಿ ರಾಷ್ಟ್ರೀಯ ಅಯೋಡಿನ್ ನ್ಯೂನತೆಯ ನಿಯಂತ್ರಣ ಅರಿವು ಕಾರ್ಯಕ್ರಮ
WhatsApp Group Join Now
Telegram Group Join Now

 ಕಲಘಟಗಿ:-ಗುಡ್ ನ್ಯೂಸ್ ವೇಲ್ಫೇರ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆಯ ಮಹಾವಿದ್ಯಾಲಯ ಕಲಘಟಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ & ಕಲಘಟಗಿ ತಾಲೂಕ ವೈದ್ಯಾಧಿಕಾರಿಗಳ ಸಹಯೋಗದಲ್ಲಿ ರಾಷ್ಟ್ರೀಯ ಅಯೋಡಿನ್ ನ್ಯೂನತೆಯ ನಿಯಂತ್ರಣ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲೂಕಾ ಎಪಿಡಮಿಲೋಜಿಸ್ಟ್ ಡಾ. ಸಿದ್ದಾರ್ಥ ಹಣಮಸಾಗರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅಯೋಡಿನ್ ಎಂದರೆ ಭೂಮಿಯಲ್ಲಿ ಅಡಗಿರುವ ಒಂದು ಸೂಕ್ಷ್ಮ ಅಂಶ. ಮಾನವನ ದೇಹದ ರಚನೆ ಮತ್ತು ಬೆಳವಣಿಗೆ ಅಯೋಡಿನ್ ಬಹು ಮುಖ್ಯವಾಗಿದೆ. ಸಾಧಾರಣವಾಗಿ ಮಾನವನಲ್ಲಿ 100 ರಿಂದ 300 ಮೈಕ್ರೋಗ್ರಾಮ್ ಇರಬೇಕು ಇದರಿಂದ ಮಾನವನು ತನ್ನ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶ್ರೀ ರತ್ನಂ ಸಿಲಿ ಅಯೋಡಿನ್ ಕೊರತೆಯು ಮಾನವನ ಆರೋಗ್ಯದಲ್ಲಿ ತುಂಬಾ ಮುಖ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕುಬ್ಜತನ, ಕಿವುಡುತನ, ಕಣ್ಣಿನ ದೃಷ್ಟಿದೋಷ ಕಂಡುಬರುತ್ತದೆ. ಅಯೋಡಿನ್ ಇರುವ ಆಹಾರ ಸೇವಿಸಬೇಕು ಮುಖ್ಯವಾಗಿ ಕ್ಯಾರೆಟ್, ಮೀನು, ಫ್ರೆಂಚ್ ಮೀನು ಮೊದಲಾದವುಗಳನ್ನು ಆಹಾರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ಮಾಲತೇಶ ಕುಲಕರ್ಣಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಶ್ರೀ ಎಂ ಬಿ ಉಳ್ಳಾಗಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಲಕ್ಷ್ಮಿ ಕಮತಮನಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ರಾ ಚಾರ್ಯರಾದ ಡಾ. ಎಂ.ಡಿ ಹೊರಕೇರಿ, ಶ್ರೀ ಹೇಮರೆಡ್ಡಿ, ಶ್ರೀ ಶಶಿಧರಯ್ಯ ಹೆಬ್ಬಳಿಮಠ, ಶ್ರೀ ಮಹಾಂತೇಶ ನಿಂಬಣ್ಣವರ, ಕು.ಅಕ್ಷತಾ ಕುಬ್ಯಾಳ, ಕು ನೀಲಮ್ಮ ನೆನಕ್ಕಿ, ,ಶ್ರೀಮತಿ ಕುಲಸುಂಬಿ ಶೇಖ್, ಶ್ರೀ ಶಶಿಕುಮಾರ ಕಟ್ಟಿಮನಿ, ಶ್ರೀ ರೆಹಮಾನ್ ಗೋಲಳ್ಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರ ನಾಗರಾಜ ಎಡಿಗೆ ವಂದಿಸಿದರು.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!