Ad imageAd image

ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ: ಚನ್ನರಾಜ ಹಟ್ಟಿಹೊಳಿ

Bharath Vaibhav
ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ: ಚನ್ನರಾಜ ಹಟ್ಟಿಹೊಳಿ
WhatsApp Group Join Now
Telegram Group Join Now

ಬೆಳಗಾವಿ:- ರುದ್ರಣ್ಣ ಆತ್ಮಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ವಿಧಾನ ಪರಿಷತ್ ‌ಸದಸ್ಯ‌ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ

ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಪಿಎಗಳನ್ನು ನಂಬಿಕೊಂಡು ಕೆಲಸ ಮಾಡಲ್ಲ. ನಾನಾಗಲಿ, ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಆಗಲಿ ಜನರ ಜೊತೆಗೆ ನೇರವಾಗಿ ಸಂಪರ್ಕ ಹೊಂದಿದ್ದೇವೆ. ಜನರ ಜೊತೆಗೆ ‌ನೇರ ಸಂಪರ್ಕ ಹೊಂದಿರುವ ರಾಜಕಾರಣಿ‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಂದರು.‌

ಸಚಿವೆ ಹೆಬ್ಬಾಳ್ಕರ್ ಪಿಎ ಸೋಮು ವರ್ಗಾವಣೆ ವಿಚಾರದಲ್ಲಿ ಹಣಕಾಸಿನ ಪಡೆದಿರುವ ವ್ಯವಹಾರಕ್ಕೆ ವಿಚಾರವಾಗಿ ಮಾತನಾಡಿದ ಅವರು, ಈ ರೀತಿಯಲ್ಲಿ ವ್ಯವಹಾರ ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ರುದ್ರಣ್ಣ ಯುವ ಸರ್ಕಾರಿ‌ ನೌಕರನಾಗಿದ್ದ, ಇನ್ನೂ ಸಾಕಷ್ಟು ವರ್ಷ ಸರ್ವಿಸ್ ಇತ್ತು. ಘಟನೆ ‌ಸಂಬಂಧ ನನಗೆ‌‌ ಪೂರ್ಣ ಮಾಹಿತಿ ಇಲ್ಲ. ಪೊಲೀಸ್ ತನಿಖೆ ಆಗಿ ಪ್ರಾಥಮಿಕ ‌ವರದಿ ಬರಲಿ, ರುದ್ರಣ್ಣ ಸಾವಿಗೂ ‌ಮುನ್ನ ವಾಟ್ಸಪ್ ಗ್ರೂಪಿನಲ್ಲಿ ರವಾನಿಸಿದ್ದ ಸಂದೇಶ ಗಮನಿಸಿದ್ದೇನೆ. ತಹಶಿಲ್ದಾರ್ ಕಚೇರಿಯಲ್ಲಿ ಅನ್ಯಾಯವಾಗ್ತಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ಸಂಬಂಧ ‌ತನಿಖೆ‌ ನಡೆಸಿ, ಪೊಲೀಸರು ಹೇಳಿಕೆ‌ ನೀಡಬೇಕು, ಅದಿನ್ನೂ ಬಂದಿಲ್ಲ ಎಂದರು.

ಈಶ್ವರಪ್ಪರಂತೆ ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಪ್ರಕರಣ, ಈ ಪ್ರಕರಣ ಬೇರೆ ಬೇರೆ ಇವೆ. ಗುತ್ತಿಗೆದಾರ ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳ ಎದುರು ದಾಖಲೆ ಸಮೇತ ಪ್ರತಿಕ್ರಿಯಿಸಿದ್ದರು. ಬಿಲ್ ಬಿಡುಗಡೆಗೆ ಈಶ್ವರಪ್ಪ ಅಂದು ಲಂಚ ಕೇಳಿದ್ದರು. ಆತ್ಮಹತ್ಯೆ ಸಂದರ್ಭದಲ್ಲಿ ಈಶ್ವರಪ್ಪ ಹೆಸರನ್ನು ಅಂದು ಸಂತೋಷ ಪಾಟೀಲ ಉಲ್ಲೇಖಿಸಿದ್ರು. ಆದರೆ ಇಲ್ಲಿ ರುದ್ರಣ್ಣ ವರ್ಗಾವಣೆ ವಿಚಾರ ಹೆಬ್ಬಾಳ್ಕರ್‌‌ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರನ್ನು ಪ್ರಸ್ತಾಪ ಮಾಡಿಲ್ಲ ಎಂದರು.‌

ವರದಿ: ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!