ಮಾನ್ವಿ:-ವೃತ್ತ ನಿರ್ಮಾಣ ಸಂಬಂಧ ಮಾನ್ವಿಯಲ್ಲಿ ಮುಖಂಡರ ಸಭೆ,ಮಾನ್ವಿ ಪಟ್ಟಣದ ಬಾಲಾಜಿ ಕಂಫಟ್೯ ನಲ್ಲಿ ನಡೆದ ಸಭೆ.ನಾನಾ ಸಮಾಜದ ಮುಖಂಡರು ಭಾಗಿ ಅಂಬೇಡ್ಕರ್, ಬಸವೇಶ್ವರ ಮತ್ತು ಮಹರ್ಷಿ ವೃತ್ತ ಸಂಬಂಧ ಸಭೆ

ಮಾನ್ವಿ ಪಟ್ಟಣದ ಮೂಲಕ ರಾಜ್ಯ ಹೆದ್ದಾರಿ ಹಾದು ಹೋಗಿದ್ದರಿಂದ ಕಾಮಗಾರಿ ಪ್ರಾರಂಭವಾಗಿದೆ.ಹೀಗಾಗಿ ಅಂಬೇಡ್ಕರ್,ಬಸವೇಶ್ವರ ಮತ್ತು ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಸಂಬಂಧ ಬಾಲಾಜಿ ಕಂಫಟ್೯ನಲ್ಲಿ ನಾನಾ ಸಮಾಜದ ಮುಖಂಡರ ಸಭೆ ನಡೆಯಿತು.
ಹೊಸಪೇಟೆ ಸೇರಿದಂತೆ ನಾನಾ ಜಿಲ್ಲೆಯಲ್ಲಿ ವೃತ್ತಕ್ಕೆ ಅವಕಾಶ ಕೊಟ್ಟು ರಸ್ತೆ ನಿರ್ಮಾಣ ಮಾಡಿರುವುದು ಉದಾಹರಣೆ ಇದೆ.ಅದೆ ರೀತಿಯಲ್ಲಿ ಮಾನ್ವಿ ಪಟ್ಟಣದಲ್ಲಿ ಅಂಬೇಡ್ಕರ್, ಮಹರ್ಷಿ ಮತ್ತು ಬಸವೇಶ್ವರ ವೃತ್ತವನ್ನು ನಿರ್ಮಾಣ ಮಾಡೋಕೆ ತಾಲೂಕಾಡಳಿತ ಹಾಗು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಅದೆ ರೀತಿಯಲ್ಲಿ ಕಾನೂನು ಬದ್ಧವಾಗಿ ಹೆದ್ದಾರಿಯ ಅಧಿಕಾರಿಗಳು ಗುರುತಿಸಿದ ಮಾನದಂಡದಂತೆ ರಸ್ತೆ ಅಗಲೀಕರಣ ಮಾಡಬೇಕು.ರಾಜಕಾರಣಿಗಳ ಪಿತೂರಿಯಿಂದ ನಡೆದ ಕಡಿಮೆ ರಸ್ತೆ ಅಗಲೀಕರಣವನ್ನು ಬಿಟ್ಟು ಹೆದ್ದಾರಿ ಪ್ರಾಧಿಕಾರ ಸೂಚಿಸದಂತೆ ರಸ್ತೆ ನಿರ್ಮಾಣ ಮಾಡಬೇಕು ಎಂಬ ಚರ್ಚೆ ನಡೆಯಿತು.
ವರದಿ :-ಶಿವ ತೇಜ




