ಅಮೆರಿಕಾ : ಇಡೀ ಪ್ರಪಂಚದಾದ್ಯಂತ ಕುತೂಹಲ ಮೂಡಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲತಾಂಶ ಪ್ರಕಟಗೊಂಡಿದ್ದು, ಸರ್ವೆ ರಿಪೋರ್ಟ್ ಗಳು ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಇನ್ನು ವಿಶೇಷ ಅಂದ್ರೆ ಭಾರತೀಯ ಮೂಲದ ಉಷಾ ಚಿಲುಕುರಿ ವ್ಯಾನ್ಸ್ ಅಮೆರಿಕಾದ ದ್ವಿತೀಯ ಮಹಿಳೆಯ ಸ್ಥಾನ ಒಲಿದಿದೆ.
ಓಹಾಯೋ ಸೆನೆಟರ್ J.D. ವ್ಯಾನ್ಸ್, ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು,ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್, ಅಮೆರಿಕಾದ ದ್ವಿತೀಯ ಮಹಿಳೆಯಾಗಿದ್ದಾರೆ.ಈ ಮೂಲಕ ಅಮೆರಿಕಾದ ದ್ವಿತೀಯ ಮಹಿಳೆಯ ಸ್ಥಾನ ಪಡೆದ ಮೊದಲ ಹಿಂದೂ ಹಾಗೂ ಎರಡನೇ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಉಷಾ ಚಿಲುಕುರಿ ವ್ಯಾನ್ಸ್ ಅವರ ಪೋಷಕರು 1970 ರ ದಶಕದಲ್ಲಿ US ಗೆ ತೆರಳಿದ್ದರು. ಆ ನಂತರ ಉಷಾ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದರು. ಅವರ ಬಾಲ್ಯ ಮತ್ತು ಹದಿಹರೆಯದ ಆಕೆಯ ಸ್ನೇಹಿತರು ಅವರನ್ನು ‘ಪುಸ್ತಕ ಹುಳು’ ಮತ್ತು ‘ಲೀಡರ್’ ಎಂದು ಕರೆಯುತ್ತಿದ್ದರಂತೆ. ಆ ನಂತರ ಯೇಲ್ ಕಾನೂನು ಶಾಲೆಯಲ್ಲಿ ಶ್ರೀ ವಾನ್ಸ್ ಅವರನ್ನು ಭೇಟಿಯಾಗಿ 2014 ರಲ್ಲಿ ಕೆಂಟುಕಿಯಲ್ಲಿ ಹಿಂದೂ ಪಂಡಿತರ ಆಶೀರ್ವಾದದೊಂದಿಗೆ ವಿವಾಹವಾದರು.