ಚನ್ನಮ್ಮನ ಕಿತ್ತೂರು- ವೀರ ರಾಣಿ ಕಿತ್ತೂರ ಚನ್ನಮ್ಮನ ನಾಡಿನಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನ ಲೋಕಾರ್ಪಣೆಗೊಂಡು 5 ವರ್ಷ ಆಗಿದೆ ಇದರ ನಿಮಿತ್ಯ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಮಾವಿನ ತೊರೋಣ, ವಿದ್ಯುತ್, ಹೊಮಾಲೆ ಗಳಿಂದ ಅಲಂಕಾರ ಮಾಡಲಾಗಿದೆ. ಗುರುವಾರ ಬೆಳಗ್ಗೆ ವೇ ಮೂ ಶಿವಲಿಂಗಯ್ಯ ಶಾಸ್ತ್ರೀಗಳು ಮತ್ತು ಸಂಗಡಿಗರಿಂದ ಮಹಾ ಗಣಪತಿ ಉಮಾ ಮಹೇಶ್ವರ ಏಕದಶ ರುದ್ರ ಪೂಜೆ ಹಾಗೂ ಶ್ರೀ ಸಾಯಿಬಾಬಾರಿಗೆ ರುದ್ರಾಭಿಷೇಕ ರುದ್ರ ಹೋಮ ನೆರವೇರುವುದು.
ಪರಮ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಚನ್ನಮ್ಮನ ಕಿತ್ತೂರು, ಪರಮ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳು ಗುರುಮಡಿವಾಳೇಶ್ವರ ಮಠ ನಿಚ್ಚಣಕಿ, ಹಾಗೂ ನಾಡಿನ ಗಣ್ಯ ಮಾನ್ಯರು ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಬೇವಿನ ವೃಕ್ಷದ ಕೆಳಗೆ ಗುರು ಸ್ಥಾನ ಸ್ಥಾಪನೆಗೊಳಿಸಲಾಗುವುದು.
ಮಧ್ಯಾಹ್ನ ಆರತಿ ನಂತರ ಮಹಾ ಪ್ರಸಾದವಿರುತ್ತದೆ.
ಸಂಜೆ 6 ಘಂಟೆಯಿಂದ ನಾಡಿನ ಖ್ಯಾತ ಕಲಾವಿದರಾದ ಈಶ್ವರ ಗಡಿಬಿಡಿ, ರವೀಂದ್ರ ಬ. ಜಕಾತಿ, ಪ್ರಲ್ಹಾದ ಶಿಗ್ಗಾಂವಿ, ಅನಂತ ಕುಲಕರ್ಣಿ, ಇವರುಗಳಿಂದ ಸಂಗೀತ ಕಾರ್ಯಕ್ರಮ ಜರುಗುವುದು.
ಬೆಳ್ಳಗೆಯಿಂದ ಭಕ್ತರು ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಬಂದು ಪೂಜೆ ಮತ್ತು ಉಮಾ ಮಹೇಶ್ವರ ಏಕದಶ ರುದ್ರ ಹೋಮದಲ್ಲಿ ಭಕ್ತರು ಭಾಗವಹಿಸಿದ್ಜರು. ನಂತರ ಮಧ್ಯಾಹ್ನ ಮಾಹಾ ಪ್ರಸಾದ ಜರುಗಿತು.
ವರದಿ- ಬಸವರಾಜ ಭಿಮರಾಣಿ. ಜಗದೀಶ ಕಡೋಲಿ.