ನಿಮ್ಮ ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವವರಾಗಿದ್ದರೆ , ಅದೃಷ್ಟ ಖುಲಾಯಿಸಿದಂತೆ. ಇತ್ತೀಚೆಗೆ ಹಳೆ ನೋಟುಗಳು ಮತ್ತು ನಾಣ್ಯಗಳಿಗೆ ಬೇಡಿಕೆ ಹೆಚ್ಚಿದ್ದು, ಕೆಲವರು ಆನ್ಲೈನ್ ಹರಾಜಿನಲ್ಲಿ ಲಕ್ಷಗಟ್ಟಲೆ ರೂ. ಗಳನ್ನು ತೆತ್ತು ಇವುಗಳನ್ನು ಖರೀದಿಸುತ್ತಿದ್ದಾರೆ.
ಇದಕ್ಕೆ ವೇದಿಕೆಯಾಗಿರುವುದು ಕಾಯಿನ್ ಬಜಾರ್. ಅಲ್ಲಿ ಸಂಗ್ರಹಕಾರರು ಹಳೆ ನೋಟುಗಳು ಮತ್ತು ನಾಣ್ಯಗಳನ್ನು ಕೆಲವೊಮ್ಮೆ 1 ಅಥವಾ 2 ರೂ. ನೋಟುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಆನ್ಲೈನ್ ಹರಾಜಿನಲ್ಲಿ 1 ರೂಪಾಯಿ ನೋಟು 7 ಲಕ್ಷದವರೆಗೆ ಗಳಿಸಬಹುದು ಎನ್ನಲಾಗಿದೆ.
1 ರೂಪಾಯಿ ನೋಟಿಗೆ ಯಾರು ಲಕ್ಷಾಂತರ ರೂ. ನೀಡುತ್ತಾರೆ ಎಂದು ನೀವು ಮೂಗು ಮುರಿಯಬಹುದು. ಉತ್ತರ ಅದರ ಐತಿಹಾಸಿಕ ಮಹತ್ವದಲ್ಲಿದೆ. ಭಾರತ ಸರ್ಕಾರ 29 ವರ್ಷಗಳ ಹಿಂದೆ 1 ರೂಪಾಯಿ ನೋಟು ಮುದ್ರಣವನ್ನು ನಿಲ್ಲಿಸಿತ್ತು. ಕೆಲವು ಸ್ವಾತಂತ್ರ್ಯ ಪೂರ್ವ ಆವೃತ್ತಿಗಳು ಸಂಗ್ರಹಕಾರರಿಗೆ ಅಪಾರ ಮೌಲ್ಯವನ್ನು ತಂದುಕೊಟ್ಟಿವೆ.
ಉದಾಹರಣೆಗೆ ಬ್ರಿಟಿಷ್ ಇಂಡಿಯಾದ ಅಪರೂಪದ 1 ರೂ. ನೋಟು, ಆಗಿನ-ಗವರ್ನರ್ ಜೆ.ಡಬ್ಲ್ಯೂ. ಕೆಲ್ಲಿ ಅವರ ಸಹಿಯನ್ನು ಹೊಂದಿದ್ದು 1935 ರಲ್ಲಿ ಬಿಡುಗಡೆ ಮಾಡಲಾಗಿದೆ. ಸುಮಾರು 80 ವರ್ಷಗಳ ಹಳೆಯ ಈ ನೋಟು, ಅದರ ಅಪರೂಪತೆ ಮತ್ತು ಐತಿಹಾಸಿಕ ಮೌಲ್ಯದಿಂದಾಗಿ 7 ಲಕ್ಷ ರೂಪಾಯಿಗಳವರೆಗೆ ಗಳಿಸುವ ಸಾಧ್ಯತೆ ಇದೆ.
ತಮ್ಮ ಸಂಗ್ರಹಣೆಗಳನ್ನು ಮಾರಾಟ ಮಾಡಲು ಆಸಕ್ತಿ ಹೊಂದಿರುವವರಿಗೆ, Coin Bazaar ಮತ್ತು Quikr ನಂತಹ ಆನ್ಲೈನ್ ಪ್ಲಾಟ್ಫಾರ್ಮ್ಗಳು ಹರಾಜು ಮತ್ತು ಮಾರಾಟಕ್ಕೆ ಮಾರ್ಗಗಳನ್ನು ಒದಗಿಸುತ್ತವೆ.
ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಖರೀದಿ ಅಥವಾ ಮಾರಾಟವನ್ನು ಅಧಿಕೃತವಾಗಿ ಅನುಮತಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.