ಬೆಂಗಳೂರು : ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಒಂದೇ ದಿನ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 20 ದಿನಗಳ ಬಳಿಕ 10 ಗ್ರಾಂ ಚಿನ್ನದ ಬೆಲೆ 80 ಸಾವಿರದ ಗಡಿಯಿಂದ ಕೆಳಗಿಳಿದಿದೆ.
ಗುರುವಾರ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1790 ರೂ.ಇಳಿಕೆಯಾಗಿ, 78560ರೂ.ಗಳಿಗೆ ತಲುಪಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ 80350 ರೂ.ಗಳಾಗಿತ್ತು. ದಿಲ್ಲಿಯಲ್ಲೂ 10 ಗ್ರಾಂ ಚಿನ್ನಕ್ಕೆ 1650 ರೂ.ಇಳಿಕೆಯಾಗಿ 79,500ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲೂ ಪ್ರತೀ ಕೆ.ಜಿ.ಗೆ 900 ರೂ.ಕಡಿಮೆಯಾಗಿ ಬೆಲೆ 93,800 ರೂ.ಗೆ ತಲುಪಿದೆ. ಬೆಂಗಳೂರಲ್ಲಿ ಪ್ರತೀ ಕೆ.ಜಿ. ಬೆಳ್ಳಿ 3,000 ರೂ. ಕಡಿತವಾಗಿ 93,000 ರೂ.ಗೆ ತಲುಪಿದೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಡಾಲರ್ ಬೆಲೆ ಹೆಚ್ಚಳವಾಗುತ್ತಿದ್ದು, ಚಿನ್ನದ ಬೆಲೆ ಗಣನೀಯವಾಗಿ ಕುಸಿತವಾಗುತ್ತಿದೆ.
ಡಾಲರ್ ಬೆಲೆ ಹೆಚ್ಚಾಗುತ್ತಿರುವುದರಿಂದ ಚಿನ್ನದ ಬೆಲೆ ಏಕಾಏಕಿ ಕುಸಿತವಾಗಿದೆ. ಇದು ಸಹಜವಾಗಿಯೇ ಚಿನ್ನ ಪ್ರಿಯರಿಗೆ ಖುಷಿಯಾಗಿದೆ. ಚಿನ್ನದ ಬೆಲೆಯ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಚಿನ್ನ ಖರೀದಿ ಪ್ರಕ್ರಿಯೆ ಜೋರಾಗುವ ಸಾಧ್ಯತೆ ಇದೆ.