ನಿನ್ನೆ ಮಧ್ಯಾಹ್ನ 1:00ಗೆ ನಡೆದ ಘಟನೆಯು ರೈತನ ಬದುಕನ್ನು ಕಷ್ಟಕ್ಕೆ ದೂಡಿದೆ

Bharath Vaibhav
ನಿನ್ನೆ ಮಧ್ಯಾಹ್ನ 1:00ಗೆ ನಡೆದ ಘಟನೆಯು ರೈತನ ಬದುಕನ್ನು ಕಷ್ಟಕ್ಕೆ ದೂಡಿದೆ
WhatsApp Group Join Now
Telegram Group Join Now

 ಮಾನ್ವಿ:-ಮಾನವಿ ಪಟ್ಟಣದ ಹತ್ತಿರಕ್ಕೆ ಹೊಂದಿಕೊಂಡಿರುವ ನೀರ್ ಮಾನ್ವಿ ತಾಂಡದಲ್ಲಿ ನಿನ್ನೆ ಮಧ್ಯಾಹ್ನ 1:00ಗೆ ನಡೆದ ಘಟನೆಯು ರೈತನ ಬದುಕನ್ನು ಕಷ್ಟಕ್ಕೆ ದೂಡಿದೆ

ರೈತ ಪರಶುರಾಮ್ ತನ್ನ 12 ಎಕರೆಯಲ್ಲಿ ಬೆಳೆದ,ಹತ್ತಿ ಬೆಳೆಯು ಸಂಪೂರ್ಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ.15 ಲಕ್ಷ ಸಾಲ ತೀರಿಸಲು ನಮಗೆ ದಿಕ್ಕು ತೋಚುತ್ತಿಲ್ಲ ಎಂದು ಗೋಳಾಡಿದರು.ಸರಿಯಾದ ಮಳೆಯಾಗದ ಕಾರಣ ರೈತರು ಮೊದಲೇ ಸಂಕಷ್ಟದಲ್ಲಿದ್ದು

ಇದಕ್ಕೆ ಪ್ರತಿಯಾಗಿ ರೈತನ ಜೀವನಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 12 ಎಕರೆಯಲ್ಲಿ ಬೆಳೆದಿದ್ದ 100 ಕ್ವಿಂಟಲ್ ಹತ್ತಿ ಅಕ್ಕಿ ಜೋಳ ಕಾಳು ಕಡಿ ಮತ್ತಿತರ ಮನೆ ಸಾಮಾನುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ

ಇದರಿಂದ ರೈತನು ಸಂಕಷ್ಟದಿಂದ ಮನೆ ಇಲ್ಲದೆ ಬೆಳೆದ ಬೆಳೆಯು ಇಲ್ಲದೆ ಸಾಲಭರಿತನಾಗಿ ಚಿಂತಾ ಕ್ರಾಂತನಾಗಿದ್ದಾನೆ ರೈತರ ಸಂಕಷ್ಟವನ್ನು ಆಲಿಸುವ ಜನಪ್ರತಿನಿಧಿಗಳು ತಾಲೂಕ ಆಡಳಿತ ಅಧಿಕಾರಿಗಳು ಬಾರದ ಕಾರಣ

ನೊಂದ ರೈತನು ಸರ್ಕಾರಕ್ಕೆ ಸಹಾಯವನ್ನು ಕೋರಿರುತ್ತಾನೆ ಇದರ ಬಗ್ಗೆ ಗಮನಹರಿಸಿ ಸರ್ಕಾರವು ರೈತನಿಗೆ ನ್ಯಾಯ ಒದಗಿಸಬೇಕೆಂದು BV 5 ನ್ಯೂಸ್ ಮುಂದೆ ಗ್ರಾಮಸ್ಥರು ಒತ್ತಾಯ ಮಾಡಿದರು.

ವರದಿ:- ಶಿವತೇಜ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!