ಕುಟುಂಬ ರಾಜಕಾರಣಕ್ಕೆ ಮತ ಹಾಕಬೇಡಿ -ಲಗ್ಗೆರೆ ನಾರಾಯಣ ಸ್ವಾಮಿ

Bharath Vaibhav
ಕುಟುಂಬ ರಾಜಕಾರಣಕ್ಕೆ ಮತ ಹಾಕಬೇಡಿ -ಲಗ್ಗೆರೆ ನಾರಾಯಣ ಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು : –ಚನ್ನಪಟ್ಟಣ ವಿಧಾನ ಸಭಾ ಉಪ ಚುನಾವಣೆಯಲ್ಲಿ ವಾರ್ಡ ನಂಬರ್ ೨೯ರಲ್ಲಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾದ್ಯಮದವರ ಜೊತೆಗೆ ಮಾತನಾಡಿ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣ ಸ್ವಾಮಿ ಹೇಳಿದರು.

ಈ ಚನ್ನಪಟ್ಟಣ ಉಪ ಚುನಾವಣೆ ಬರಲಿಕ್ಕೆ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾರಣ ಅಧಿಕಾರ ಆಸೆಗಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸರ್ಕಸ್ ಮಾಡಿ ಗೆದ್ದು ಕೇಂದ್ರ ಸಚಿವರಾದರು ಮಗನ ಸಲುವಾಗಿ ಮಂಡ್ಯಕ್ಕೆ ಹೋಗಿದ್ದು ಚನ್ನಪಟ್ಟಣ ಮತದಾರರಿಗೆ ಚೆನ್ನಾಗಿ ಗೊತ್ತಿದೆ ಚನ್ನಪಟ್ಟಣ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿದ್ದರು ಚನ್ನಪಟ್ಟಣ ಅಭಿವೃದ್ಧಿ ಮಾಡಿಲ್ಲಾ ಕುಮಾರ್ ಸ್ವಾಮಿಗೆ ಅಧಿಕಾರ ಮಾತ್ರ ಬೇಕು ಈಗ ಮಗನಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಸ್ ಮಾಡಿ ಮಗನಿಗೆ ಟಿಕೆಟ್ ತಂದು ಶತಾಯಗತಾಯ ನಿಖಿಲ್ ಕುಮಾರ್ ಸ್ವಾಮಿ ಗೆಲ್ಲಿಸಬೇಕು

ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ ನಿಖಿಲ್ ಕುಮಾರ್ ಸ್ವಾಮಿ ಸೊಲುವುದು ನಿಶ್ಚಿತ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ಲಗ್ಗೆರೆ ನಾರಾಯಣ ಸ್ವಾಮಿ ಹೇಳಿದರು ಕುಟುಂಬದ ರಾಜಕಾರಣಕ್ಕೆ ಚನ್ನಪಟ್ಟಣ ಮತದಾರರು ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಸೊಲುಸುತ್ತಾರೆ ಕೈ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಗೆಲ್ಲುತ್ತಾರೆ ಎಂದು ಲಗ್ಗೆರೆ ನಾರಾಯಣ ಸ್ವಾಮಿ ನಗರದ ಪ್ರಸಿದ್ಧ ಶ್ರೀ ಪಡವೇಟ್ಟಮ್ಮ ದೇವಸ್ಥಾನದ ಆವರಣದಲ್ಲಿ ಮಾದ್ಯಮದ ಮುಂದೆ ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ೨೯ ವಾರ್ಡಿನ ನಗರ ಸಭೆ ಸದಸ್ಯೆ ಭಾನುಪ್ರಿಯಾ, ಜೈ ಗಣೇಶ್, ಯೇಸು, ಅರುಣ್, ಉಮೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!