Ad imageAd image

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ : 24 ಮಂದಿ ಸ್ಥಳದಲ್ಲಿಯೇ ಸಾವು 

Bharath Vaibhav
ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ : 24 ಮಂದಿ ಸ್ಥಳದಲ್ಲಿಯೇ ಸಾವು 
WhatsApp Group Join Now
Telegram Group Join Now

ಕರಾಚಿ : ಪಾಕಿಸ್ತಾನದ ರೈಲು ನಿಲ್ದಾಣವೊಂದರಲ್ಲಿ ನಡೆದ ಸ್ಫೋಟದ ಪರಿಣಾಮ ಕನಿಷ್ಠ 24 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಕ್ವೆಟ್ಟಾ ದಿಂದ ಪೇಷಾವರ್‌ ಗೆ ಪ್ರಯಾಣಿಸುತ್ತಿದ್ದ ರೈಲೂ ಸಹ ಈ ಸ್ಫೋಟದಲ್ಲಿ ಘಾಸಿಗೊಂಡಿದ್ದು, ಘಟನೆಯ ಭೀಕರತೆಯನ್ನು ಹೆಚ್ಚಿಸಿದೆ.

ಸೂಸೈಡ್‌ ಬಾಂಬರ್‌ ಒಬ್ಬ ಈ ಆತಂಕವನ್ನು ಸೃಷ್ಟಿಸಿದ್ದಾನೆಂದು ಪ್ರಾಥಮಿಕ ವರದಿಗಳು ಹೇಳಿದ್ದು, ಹೆಚ್ಚಿನ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.

ಸ್ಫೋಟ ನಡೆದ ವೇಳೆ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಈ ವೇಳೆ ನಿಲ್ದಾಣಕ್ಕೆ ಆಗಮಿಸಿದ ಉಗ್ರಗಾಮಿ ರೈಲಿನೊಂದಿಗೆ ತನ್ನನ್ನೂ ಸಹ ಸ್ಫೋಟಿಸಿಕೊಂಡಿದ್ದ.

ಉಗ್ರಗಾಮಿಯು ಬಲೂಚ್‌ ಲಿಬರೇಷನ್‌ ಆರ್ಮಿಯ ಸದಸ್ಯ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ಪ್ರಾರಂಭಗೊಂಡಿದೆ. ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!