Ad imageAd image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ‌. ಟ್ರಸ್ಟ್ (ರಿ,)ಸೇಡಂ ತಾಲೂಕು.ತಾಲೂಕ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ.

Bharath Vaibhav
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ‌. ಟ್ರಸ್ಟ್ (ರಿ,)ಸೇಡಂ ತಾಲೂಕು.ತಾಲೂಕ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ.
WhatsApp Group Join Now
Telegram Group Join Now

ಸೇಡಂ: ಪಟ್ಟಣದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತಾಲೂಕ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು ಎಲ್ಲಾ ಗಣ್ಯ ಅತಿಥಿಗಳನ್ನ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಪ್ರಾಸ್ತವಿಕ ನುಡಿ ಶ್ರೀ ಜಯಂತ ಪೂಜಾರಿ ಪ್ರಾದೇಶಿಕ ನಿರ್ದೇಶಕರು ಕಲಬುರಗಿ ಪ್ರಾದೇಶಿಕ ವ್ಯಾಪ್ತಿ ಇವರು ಕ್ಷೇತ್ರದ ಹಿನ್ನೆಲೆ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸುಮಾರು 43 ವರ್ಷಗಳ ಇತಿಹಾಸವನ್ನು ಹೊಂದಿರುವಂತದ್ದು.. ಪ್ರಗತಿಬಂಧು ಸ್ವಸಹಾಯ ಸಂಘಗಳ ರಚನೆ ಮಾಡಿ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಆಗುವ ಉದ್ದೇಶದಿಂದ ಗ್ರಾಮಭಿವೃದ್ಧಿಗಾಗಿ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು. ಪ್ರಗತಿಬಂಧು ಸ್ವಸಹಾಯ ಸಂಘಗಳಿಗೆ ಆರ್ಥಿಕ ಸೌಲಭ್ಯವನ್ನ ಬ್ಯಾಂಕಿನ ಮೂಲಕ ಪ್ರಗತಿನಿಧಿಯನ್ನು ಕೊಡಿಸುವಂತ ಕೆಲಸವನ್ನ ಧರ್ಮಸ್ಥಳ ಸಂಸ್ಥೆ ಬಿಸಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಕ್ಕೂಟ ಪದಾಧಿಕಾರಿಗಳು ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳಬಾರದು ಧರ್ಮಸ್ಥಳ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ಜವಾಬ್ದಾರಿ ಇರುವ ಸಂಘದ ಸದಸ್ಯರಿಗೆ ಸರಿಯಾದ ಮಾಹಿತಿಯನ್ನು ನೀಡುವುದು. ಸಂಘಗಳ ಬಲವರ್ಧನೆ ಒಕ್ಕೂಟ ಪದಾಧಿಕಾರಿಗಳ ಕೈಯಲ್ಲಿದೆ ಎಂದು ತಿಳಿಸಿದರು.

ನೀಲಂಬರಿ ಬ್ಯಾಂಕ್ ಅಧಿಕಾರಿಗಳು, ಬ್ಯಾಂಕ್ ಆಫ್ ಬರೋಡ, ಸೇಡಂ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು BOB ಬ್ಯಾಂಕ್ ನಲ್ಲಿ ಸಿ,ಸಿ ಖಾತೆಯನ್ನ ತೆರೆದು ಸ್ವಸಹಾಯ ಸಂಘಗಳಿಗೆ ಸಾಲವನ್ನು ಕೊಡಿಸುವಂತದ್ದು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಎಸ್,ಕೆ,ಡಿ,ಆರ್,ಡಿ,ಪಿ, ಸಂಸ್ಥೆ ಸಾಲವನ್ನು ಕೊಡುವುದಿಲ್ಲ.. ಬ್ಯಾಂಕಿನ ಮೂಲಕ ಕೊಡಿಸುತ್ತದೆ ಎಂದು ತಿಳಿಸಿದರು.

ಶ್ರೀ ಶಿವಯ್ಯಸ್ವಾಮಿ, ಸಿದ್ದಯ್ಯಸ್ವಾಮಿ ಬಿಬ್ಬಳ್ಳಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರು ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಗ್ರಾಮೀಣ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂಬ ಉದ್ದೇಶ ಇದರದ್ದಾಗಿದೆ. ಈ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ಸಂಘದ ಸದಸ್ಯರಿಗೆ ಮಾಹಿತಿಯನ್ನು ನೀಡುವಂಥದ್ದು, ಅವರಿಗೆ ತಿಳುವಳಿಕೆಯನ್ನು ನೀಡುವಂಥದ್ದು, ಕಾರ್ಯಕ್ರಮವನ್ನು ಆಯೋಜನೆ ಮಾಡಿ ಮಾಹಿತಿಯನ್ನು ನೀಡುವ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಮ್ಮದ್.ಹಾಜಿ. ನಾಡೇಪಲ್ಲಿ ಪುರಸಭೆಯ ಮಾಜಿ ಸದಸ್ಯರು ಮಾತನಾಡಿ
ಶ್ರೀ ಧರ್ಮಸ್ಥಳ ಗ್ರಾಮೀಣ ಜನರ ಕಷ್ಟವನ್ನು ಅರಿತುಕೊಂಡು, ಅವರ ಸಮಸ್ಯೆಗಳನ್ನು ಆಲಿಸಿ. ಅವರ ಅವಶ್ಯಕತೆಗಳನ್ನು ಪರಿಶೀಲಿಸಿ ಅವರಿಗೆ ಅಗತ್ಯವಾಗುವಂತ ಪ್ರಗತಿನಿಧಿಯನ್ನು ನೀಡಿ ಅವರಿಗೆ ಆರ್ಥಿಕ ಸಹಾಯವನ್ನು ಮಾಡಿಸಿ ಅವರ ಆರ್ಥಿಕ ಅಭಿವೃದ್ಧಿಯಗಲು ಈ ಸಂಘಟನೆ ಸಹಕರಿಯಾಗಿದೆ ಎಂದರು.

ವಿಜಯಕುಮಾರ ರೆಡ್ಡಿ ಸಮಾಜ ಸೇವಕರು ಮಾತನಾಡಿ ಸಾಹಿತಿಗಳು ಸೇಡಂ ತಾಲೂಕ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೂಜ್ಯ ಡಾ// ವೀರೇಂದ್ರ ಹೆಗ್ಗಡೆಯವರು ಅವರ ತಂದೆಯವರ ಕನಸನ್ನ ನನಸು ಮಾಡುತ್ತಿದ್ದಾರೆ. ಅವರ ಪೂರ್ವಜರ ಕನಸನ್ನ ನನಸು ಮಾಡುತ್ತಿದ್ದಾರೆ. ಪೂಜ್ಯರ ದೂರ ದೃಷ್ಟಿಯಿಂದ 800 ಕಿಲೋ ಮೀಟರ್ ದೂರದಿಂದ ಇಲ್ಲಿವರೆಗೂ ವಿಸ್ತಾರವಾಗಿ ಬಂದು ಕ್ಷೇತ್ರದ ಸೇವೆಯನ್ನು ಬಂದು ಸಲ್ಲಿಸುತ್ತಿದೆ. ಶ್ರೀ ಧರ್ಮಸ್ಥಳದ ಸೇವೆ ಶ್ಲಾಘನಿಯ, ಈ ಸಂಸ್ಥೆ ಯಾವುದೆ ಜಾತಿ ಭೇದ ಮಾಡದೇ, ಯಾವುದೇ ಧರ್ಮದ ಬಗ್ಗೆ ಭೇಧ ಮಾಡದೇ ಸರ್ವಧರ್ಮದವರಿಗೆ ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ರಚನೆ ಮಾಡುವ ಮೂಲಕ ಆರ್ಥಿಕ ಸಹಕಾರವನ್ನು ಬ್ಯಾಂಕಿನ ಮೂಲಕ ಕೊಡಿಸುತ್ತಿದೆ ಎಂದು ತಿಳಿಸಿದರು.

ಶ್ರೀ ಹಾಲಪ್ಪಯ್ಯ ಸ್ವಾಮೀಜಿಗಳು ಹಾಲಪ್ಪಯ್ಯ ಮಠ, ಸೇಡಂ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಅಭಿವೃದ್ಧಿಗಾಗಿ ಶತಮಾನಗಳಿಂದ ದಾನ ಧರ್ಮವನ್ನು ಮಾಡುತ್ತಿರುವಂತ ಸಂಸ್ಥೆಯಾಗಿದೆ, ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಕಾರ್ಯಕ್ರಮ, ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮ,ದೇವಸ್ಥಾನ ಜೀರ್ಣೋದ್ದಾರ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ನಿರ್ಗತಿಕರಿಗೆ ಮಾಶಾಸನ ಮತ್ತು ವಾತ್ಸಲ್ಯ ಮನೆ ನಿರ್ಮಾಣ ಮಾಡಿಸಿಕೊಡುವಂತದ್ದು, ಈ ಸಂಸ್ಥೆಯ ಮಾನವೀಯತೆಯನ್ನು ಮೆರೆಯುವಂಥದ್ದು ಎಂದು ಹಾಲಪ್ಪಯ್ಯ ಸ್ವಾಮೀಜಿಯವರು ಮಾತನಾಡಿದರು.

ಗಣಪತಿ ಮಾಳಂಜಿ ಮಾನ್ಯ ಜಿಲ್ಲಾ ನಿರ್ದೇಶಕರು ಕಲಬುರಗಿ ಜಿಲ್ಲೆ ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲವನ್ನು ನೀಡುವುದಿಲ್ಲ. ಬಿಸಿ ಪ್ರತಿನಿಧಿಯಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಸಂಸ್ಥೆ ಸಾಲವನ್ನು ನೀಡುವುದಿಲ್ಲ. ಸಂಸ್ಥೆ ಬಡ್ಡಿ ವ್ಯವಹಾರವನ್ನು ಮಾಡುತ್ತಿಲ್ಲ. ಈ ಬಗ್ಗೆ ತಪ್ಪು ಮಾಹಿತಿಯನ್ನು ತಿಳಿದುಕೊಳ್ಳಬಾರದು. ಧರ್ಮಸ್ಥಳ ಸಂಸ್ಥೆ ಬ್ಯಾಂಕಿನ ಮೂಲಕ ಅತೀ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಗ್ರಾಮೀಣ ಜನರಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ. ಸಂಸ್ಥೆಯು ಪರದರ್ಶಕವಾದ ವ್ಯವಹಾರವನ್ನು ಮಾಡುತ್ತ ಭ್ಯಾಂಕ್ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರ ನಡುವೆ ದೊಡ್ಡ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಮಾನ್ಯ ನಿರ್ದೇಶಕರು ಗಣಪತಿ ಮಾಳಂಜಿ ಅವರು ತಿಳಿಸಿದರು..

ರಾಜು ನೀಲಂಗಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಸೇಡಂ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಉತ್ತಮವಾದ ಸಂಘಟನೆಯನ್ನು ಹೊಂದಿದೆ. ನಮ್ಮ ಗ್ರಾಮೀಣ ಜನರ ಜೀವನವನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಧರ್ಮಸ್ಥಳ ಸಂಸ್ಥೆ ಬಗ್ಗೆ, ತಪ್ಪಾಗಿ ಮಾತನಾಡದೆ ಸರಿಯಾದ ಮಾಹಿತಿ ಪಡೆದುಕೊಂಡು ಆ ಸಂಸ್ಥೆಯಿಂದ ಇರುವಂತ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯನ್ನು ಹೊಂದಬೇಕು ಎಂದು ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವರದಾಶಂಕರ ಬೆಟಗೇರಾ, ಶಿವಕುಮಾರ್ ಜಾಡರ್, ಶ್ರೀ ಮತಿ ಭಾಗ್ಯಲಕ್ಷ್ಮಿ ನಾಯಕೋಡಿ,ತಾಲ್ಲೂಕಿನ 60 ಒಕ್ಕೂಟಗಳ ಪದಾಧಿಕಾರಿಗಳು ದಾಖಲಾತಿ ಸಮಿತಿ ಸದಸ್ಯರು, ಗ್ರಾಮೀಣ ಸೇವಾದಾರರು ಸೇವಾಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!