ಚಾಮರಾಜನಗರ :-ನವಂಬರ್ 12 ವಿದ್ಯಾರ್ಥಿಗಳ ಜೀವನ ನಂದ ದೀಪವಾಗಿ ಇರಬೇಕು ಎಂದು ಜೆಎಸ್ಎಸ್ ಮಹಿಳಾ ಕಾಲೇಜು, ಪ್ರಾಂಶುಪಾಲ,ಡಾ ಏನ್ ಮಹಾದೇವಸ್ವಾಮಿ ತಿಳಿಸಿದರು
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಸಂಘದ ವತಿಯಿಂದ ಸೋಮವಾರ ರಾತ್ರಿ ಎರಡನೇ ಕಾರ್ತಿಕ ಸೋಮವಾರ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯನಿಗೆ ಸುಖ ಶಾಂತಿ ನೆಮ್ಮದಿ ಸಿಗಬೇಕಾದರೆ ಆಧ್ಯಾತ್ಮಿಕದಿಂದ ಮಾತ್ರ ಸಾಧ್ಯ ವಿಶೇಷವಾಗಿ ಹಿಂದುಗಳಿಗೆ ಪವಿತ್ರವಾದ ಕಾರ್ತಿಕ ಮಾಸದಲ್ಲಿ ಶಿವನ ಸ್ಮರಣೆದಿಂದ ಮನಸ್ಸಿಗೆ ಉಲ್ಲಾಸ ಸಿಗಲಿದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪರಿಹಾರವಾಗಿ ದೀಪದಂತೆ ನಿಮ್ಮ ಭವಿಷ್ಯ ಉಜ್ವಲ ವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು
ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ರಾಮಸಮುದ್ರದಕೃತಿಕಾ ಮಾತನಾಡಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸದ ಜೊತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು
ಜೆಎಸ್ಎಸ್ ಮಹಿಳಾ ಕಾಲೇಜು ಸಾಂಸ್ಕೃತಿಕ ಸಂಚಾಲಕಿ ಹಾಗೂ ಉಪನ್ಯಾಸಕಿ ಜುಮುನಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಅಭಿರುಚಿ ಬೆಳೆಸಿಕೊಳ್ಳಬೇಕು ಇದರ ಜೊತೆ ಗುರು ಹಿರಿಯರಿಗೆ ಪೋಷಕರಿಗೆ ಪರೀಕ್ಷೆ ಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸಿ ಕೀರ್ತಿ ತರಬೇಕು ಎಂದು ಕರೆ ನೀಡಿದರು
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅರುಣಾ ಶ್ರೀ, ಡಾಕ್ಟರ್ ಏಆರ್ ಸುಷ್ಮಾ, ರೂಪಶ್ರೀ, ಶ್ವೇತ, ನಂದಿನಿ, ಸೌಮ್ಯ, ಸುಮಾ, ಚೈತ್ರ, ಅಶಾರಾಣಿ, ರೇಣುಕಾಂಬ, ಮಾನಸ, ದಯನ, ಪವಿತ್ರ, ಉಮೇಶ್, ಗುರುಪ್ರಸಾದ್, ಮಲ್ಲೇಶ್, ಜೆಎಸ್ಎಸ್ ಆಸ್ಪತ್ರೆ ಆಡಳಿತ ಅಧಿಕಾರಿ ಡಾಕ್ಟರ್ ವಿಕಾಸ್, ಡಾಕ್ಟರ್ ನಂದಿ, ವಿದ್ಯಾರ್ಥಿನಿ ಸಂಘದ ಉಪಾಧ್ಯಕ್ಷೆ ಪುಷ್ಪ, ಸುಕನ್ಯ ಜಂಟಿ ಕಾರ್ಯದರ್ಶಿ, ಪಲ್ಲವಿ, ನೀಹಾರಿಕ, ಸೇರಿದಂತೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪನ್ಯಾಸಕರು, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ