Ad imageAd image

23 ಕೋಟಿ ರೂ. ಬೆಲೆ ಬಾಳುವ ದೇಶದ ದುಬಾರಿ ಎಮ್ಮೆ 

Bharath Vaibhav
23 ಕೋಟಿ ರೂ. ಬೆಲೆ ಬಾಳುವ ದೇಶದ ದುಬಾರಿ ಎಮ್ಮೆ 
WhatsApp Group Join Now
Telegram Group Join Now

ಪುಷ್ಕರ್ ಅಂತರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಹರಿಯಾಣದ ‘ಅನ್ಮೋಲ್’ ಎಂಬ ಹೆಸರಿನ ಎಮ್ಮೆ ದೇಶದ ಗಮನ ಸೆಳೆದಿದೆ.

ಈ ಎಮ್ಮೆಯನ್ನು ಖರೀದಿಸುವ ದುಡ್ಡಿನಲ್ಲಿ ಎರಡು ರೋಲ್ಸ್ ರಾಯ್ಸ್ ಕಾರುಗಳು ಅಥವಾ ಹತ್ತು ಮರ್ಸಿಡಿಸ್ ಬೆಂಜ್ ಖರೀದಿಸಬಹುದು.

ಎರಡು ರೋಲ್ಸ್ ರಾಯ್ಸ್ ಕಾರುಗಳು ಅಥವಾ ಹತ್ತು ಮರ್ಸಿಡಿಸ್ ಬೆಂಜ್ ವಾಹನಗಳಿಗಿಂತ ಹೆಚ್ಚು ಬೆಲೆಬಾಳುವ ಎಮ್ಮೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದೀಗ ಪುಷ್ಕರ್ ಅಂತರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಹರಿಯಾಣದ ‘ಅನ್ಮೋಲ್’ ಎಂಬ ಹೆಸರಿನ ಎಮ್ಮೆ ದೇಶದ ಗಮನ ಸೆಳೆದಿದೆ.

 ಬರೋಬ್ಬರಿ 1500 ಕೆಜಿ ತೂಕದ ಎಂಟು ವರ್ಷ ವಯಸ್ಸಿನ ಈ ಎಮ್ಮೆಯ ಬೆಲೆ 23 ಕೋಟಿ ರೂಪಾಯಿ. ಈ ಮೂಲಕ ಭಾರತದ ಅತ್ಯಂತ ದುಬಾರಿ ಎಮ್ಮೆ ಎಂಬ ಖ್ಯಾತಿಯನ್ನು ಗಳಿಸಿದೆ.

ಪುಷ್ಕರ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಈ ಎಮ್ಮೆಯ ಖರೀದಿಗಾಗಿ ಸಾಕಷ್ಟು ಜನ ಮುಂದಾಗಿದ್ದು, ಆದರೆ ಅದರ ಮಾಲೀಕ ಪಾಲ್ಮಿಂದ್ರ ಗಿಲ್ ಮಾತ್ರ ಅದನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೇವಲ ಎಂಟು ವಯಸ್ಸಿನ ಈ ‘ಅನ್ಮೋಲ್’ ಎಮ್ಮೆಯ ದೈನಂದಿನ ಆಹಾರ ಕ್ರಮಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತದೆ.

ಇದರ ದೈನಂದಿನ ಆಹಾರಕ್ರಮದಲ್ಲಿ 4 ಕೆಜಿ ತಾಜಾ ದಾಳಿಂಬೆ, 30 ಬಾಳೆಹಣ್ಣುಗಳು, 20 ಪ್ರೋಟೀನ್-ಭರಿತ ಮೊಟ್ಟೆಗಳು ಮತ್ತು ಕಾಲು ಕಿಲೋಗ್ರಾಂ ಬಾದಾಮಿ ನೀಡಲಾಗುತ್ತದೆ. ಈ ಆಹಾರದ ಜೊತೆಗೆ, ಅನ್ಮೋಲ್‌ಗೆ ದಿನಕ್ಕೆ ಎರಡು ಬಾರಿ ಸಾಸಿವೆ ಮತ್ತು ಬಾದಾಮಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ, ಸ್ನಾನ ಮಾಡಿಸಲಾಗುತ್ತದೆ ಎಂದು ಅದರ ಮಾಲೀಕ ಪಾಲ್ಮಿಂದ್ರ ಗಿಲ್ ಹೇಳುತ್ತಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!