ಚಾಮರಾಜನಗರ:-ಗುಂಡ್ಲುಪೇಟೆ ತಾಲ್ಲೋಕು ಬಾಚಹಳ್ಳಿ ಗ್ರಾಮದಲ್ಲಿ 5-11-2024ರಂದು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಗ್ರಾಮ ಪಂಚಾಯಿತಿಯ ಸದ್ಯಸರು ಹೋದಾಗ ಅದೇ ಗ್ರಾಮದ ಸವರ್ಣಿಯರ ಜನಾಂಗದ ಒಂದೇ ಕುಟುಂಬದ ಮೂರು ಜನರು ಸೇರಿಕೊಂಡು ನೀರು ತೆಗೆದುಕೊಳ್ಳಲು ಬಿಡದೆ ನೀನು ದಲಿತ ನೀರು ಮುಟ್ಟುವುದು ಬೇಡವೆಂದು ಅಸ್ಪೃಶ್ಯತೆ ಆಚರಣೆ ಮಾಡಿ ಕೃಷ್ಣಮೂರ್ತಿ ಮೇಲೆ ಹಲ್ಲೆ ನೆಡಿಸಿ, ಜಾತಿ ನಿಂದನೆ ಮಾಡಿರುವುದು ಹಾಗೂ ಅವಮಾನ ಮಾಡಿರುವುದು ದಲಿತ ಸಮುದಾಯಕ್ಕೆ ಅವಮಾನ ಆಗಿದೆ ಎಂದು ಗುಂಡ್ಲುಪೇಟೆ ತಾಲೋಕು ಕಚೇರಿ ಮುಂದೆ ಪ್ರತಿಭಟನೆ ಅಮ್ಮಿಕೊಳ್ಳಲಾಗಿದ್ದು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ ಗುಂಡ್ಲುಪೇಟೆ ತಾಲ್ಲೋಕಿನಲ್ಲಿ ಇದೆ ವರ್ಷ ಐದು ಪ್ರಕರಣಗಳು ದಾಖಲಾಗಿದ್ದು ಹಾಗೂ ದಲಿತರ ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕ ಚಟುವಟಿಕೆಗಳ ಮೇಲೆ ದುಷ್ಟಪರಿಣಾಮಗಳು ಸಹ ಬೀರುತ್ತದೆ ಹಾಗಾಗಿ ತಾವುಗಳು ಸಂತಸ್ತ್ರ ಕುಟುಂಬಗಳನ್ನು ಖುದ್ದು ಭೇಟಿ ಮಾಡಿ ಅವರಿಗೆ ರಕ್ಷಣೆ, ಪರಿಹಾರ ತುಂಬಿ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ, ಹಾಗೂ ಬಾಚಹಳ್ಳಿ ದಲಿತರ ಬಡಾವಣೆಗೆ ಪ್ರತ್ಯೇಕವಾಗಿ ಕುಡಿಯುವ ನೀರಿನ ಶುದ್ಧ ಘಟಕ ಸ್ಥಾಪಿಸಬೇಕು
ದಿನೇ ದಿನ ಹೆಚ್ಚುತಿದ್ದ ದಲಿತರ ಮೇಲೆನ ದೌರ್ಜನ್ಯವನ್ನು ತಾಲೋಕು ಆಡಳಿತ ವಿಪಲವಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಿಗೆ ಜಿಲ್ಲಾ ನ್ಯಾಯಾಧೀಶರು ಸಂಬಂದಿಸಿದ ಆರೋಪಿಗಳನ್ನು ಶಿಕ್ಷಸುವಲ್ಲಿ ಪಲವಾಗಿರುವುದನ್ನು ಎಸ್ ಸಿ / ಎಸ್ ಟಿ. ಹಿತರಕ್ಷಣ ಸಮಿತಿ ನಿಗಾ ವಹಿಸಬೇಕು ಎಂದು.ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.ನಂತರ ತಸೀಲ್ದಾರ್ ಗೆ ಮನವಿ ಪತ್ರ ನೀಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಯರಿಯೂರು ರಾಜಣ್ಣ, ಜಿಲ್ಲಾ ಸಂಘಟನೆ ಸಂಚಾಲಕರಾದ ನಂಜುಂಡಸ್ವಾಮಿ ಹುಣಸಿನಪುರ. ಜಾನಿ ಮ ಮ ಬೆಟ್ಟ. ಹಾಗೂ ಚಾಮರಾಜನಗರ ತಾಲೋಕು ಸಂಚಾಲಕರದ ಅನಿಲ್ ಕುಮಾರ್ ಹಾಗೂ ಗುಂಡ್ಲುಪೇಟೆ ತಾಲ್ಲೋಕು ಸಂಚಾಲಕರಾದ ರಂಗಸ್ವಾಮಿಮಾಡ್ರಹಳ್ಳಿ, ಕೊಳ್ಳೇಗಾಲ ತಾಲ್ಲೋಕು ಸಂಚಾಲಕರು ಶಿವಕುಮಾರ್, ಹಾಗೂ ದಲಿತ ಮುಖಂಡರುಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ