ಸೇಡಂ:- ಕಲಬುರ್ಗಿ ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಕಲ್ಬುರ್ಗಿ ಅಧಿಕಾರಿಗಳು ಕಳೆದ ಎರಡು ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಸೇಡಂ ತಾಲೂಕ ಆಡಳಿತ ಕಾರ್ಯಾಲಯದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಸೇಡಂ ನಗರದಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಪರಿಸರ ಮಾಲಿನ್ಯ ವಾಯುಮಾಲಿನ್ಯ ಜಲ ಮಾಲಿನ್ಯ ಕಾರ್ಖಾನೆಯಿಂದ ಕಮಲಾವತಿ ನದಿಗೆ ಕಲುಷಿತ ನೀರು ಬಿಡುವುದರ ಜೊತೆಗೆ ನಗರದಲ್ಲಿ ವಿಪರಿತ ಕಲುಷಿತ ಧೂಳು ಬಿಡುವುದರ ವಿರುದ್ಧ ದೂರು ನೀಡಲಾಗಿತ್ತು.
ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದಿನಾಂಕ ೧೨/೧೧/೨೦೨೪ರ ರಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಾರ್ಯಾಲಯ ಅಧಿಕಾರಿಗಳಾದ ಶ್ರೀಮತಿ ಶಾರದಾ ಡಿ.ಎಚ್ ನವರು ಕಾರ್ಖಾನೆಗೆ ಭೇಟಿ ನೀಡಿದರು.ಕಾರ್ಖಾನೆ ಗೇಟ್ ಮುಂಭಾಗ ಹಾಗೂ ಕಾರ್ಖಾನೆ ಹಿಂದುಗಡೆ ಇರುವ ಕಮಲಾವತಿ ನದಿ ದಂಡೆಗೆ ಭೇಟಿ ನೀಡಿ ಕಲುಷಿತ ಧೂಳು ಹಾಗೂ ಕಲುಷಿತ ನೀರು ವೀಕ್ಷಿಸಿ ಪರೀಕ್ಷೆಗೆ ತೆಗೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ವರದಾಸ್ವಾಮಿ ಬಿ ಹಿರೇಮಠ, ಸಂದೀಪ್, ಆಶಿಫ ರದೇವಾಡಿ, ವಸಂತ್ ಕುಮಾರ್ ಪೂಜಾರಿ, ಕಿಶನ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಭೀಮನಹಳ್ಳಿ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ ಕೋತ್ತಪಲ್ಲಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.