ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ

Bharath Vaibhav
ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ
WhatsApp Group Join Now
Telegram Group Join Now

ಕಲಘಟಗಿ : -ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ, ಅದು ಒಬ್ಬ ವ್ಯಕ್ತಿಯ ಜೀವ ಉಳಿಸುವ ಕಾರ‍್ಯದಲ್ಲಿ ಮಹತ್ವ ಪಡೆದಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ. ಎಲ್. ಹೊನೋಲೆ ಹೇಳಿದರು.
ಅವರು ವಕೀಲರ ಸಂಘದ ಸಭಾಭವನದಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಾ. ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟೋತ್ಥಾನ ರಕ್ತ ಕೇಂದ್ರ, ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ವಿಷಮ ಪರಿಸ್ಥಿತಿಗಳಲ್ಲಿ ರಕ್ತದ ತುರ್ತು ಅವಶ್ಯಕತೆ ಇರುತ್ತದೆ, ಆದ್ದರಿಂದ ರಕ್ತದಾನ ಮಾಡಿದರೆ ಜೀವಗಳನ್ನು ಉಳಿಸಿದಂತಾಗುತ್ತದೆ. ಆರೋಗ್ಯವಂತ ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡಬಹುದು ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ. ಎಲ್. ಹೊನೋಲೆ, ಮತ್ತು ದಿವಾಣಿ ನ್ಯಾಯಾಧೀಶರಾದ ಗಣೇಶ. ಎನ್., ರಕ್ತದಾನ ಮಾಡಿದರು. ವಕೀಲರ ಸಂಘ ಸದಸ್ಯರು, ಯುವಕರು, ತಾಲೂಕಾ ಕಾನೂನು ಸೇವಾ ಸಮಿತಿ, ಪೊಲೀಸ ಸಿಬ್ಬಂದಿ ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ ಇದ್ದರು

ವರದಿ : ಶಶಿಕುಮಾರ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!